ಟಿಕೆಟ್ ಸಿಗದಿದ್ದಕ್ಕೆ ಮಂಜುಳಾ ನಾಯ್ಡು ಅಸಮಾಧಾನ

ticket issue: manjula naidu press meet

16-04-2018

ಬೆಂಗಳೂರು: ಕಾಂಗ್ರೆಸ್ ಟಿಕೆಟ್ ವಂಚಿತೆ ಮಂಜುಳಾ ‌ನಾಯ್ಡು ಅವರು ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ರಾಜಾಜಿನಗರ ಕ್ಷೇತ್ರದಲ್ಲಿ ‌ಟಿಕೆಟ್‌ ಸಿಗದಿದ್ದಕ್ಕೆ ಅಸಮಾಧಾನಗೊಂಡು ಅವರು, ಕಾಂಗ್ರೆಸ್ ನಲ್ಲಿ 30ವರ್ಷಗಳಿಂದ ನಿಷ್ಟೆಯಾಗಿ ಕೆಲಸ ಮಾಡಿದ್ದೇನೆ, ಎನ್‌ಎಸ್‌ಯುಐ, ಮಹಿಳಾ ಘಟಕ, ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ನಲ್ಲಿ ಕೆಲಸ ಮಾಡಿದ್ದೆ, ತನು,ಮನ, ಧನ ಹಾಕಿ ಪಕ್ಷ ಕಟ್ಟಿದ್ದೇನೆ. ಬಿಜೆಪಿ ಭದ್ರ ಕೋಟೆಯಾಗಿದ್ದ ಸ್ಥಳದಲ್ಲಿ ಕಾಂಗ್ರೆಸ್ ಬಲಿಷ್ಟಗೊಳಿಸಿದ್ದೇನೆ, ನಾವು ಪಕ್ಷದ ಶಿಸ್ತಿನ ಸಿಪಾಯಿಗಳು, ಆದರೆ ಪಕ್ಷಕ್ಕೆ ನಿಷ್ಠೆಯಿಂದ ದುಡಿದ ಕಾರ್ಯಕರ್ತರಿಗೆ ಅನ್ಯಾಯ ಆಗಿದೆ ಎಂದು ದೂರಿದ್ದಾರೆ.

ಇನ್ನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ, ಅಂತಹ ಸಂದರ್ಭ ಬಂದರೇ ನಾನು ಬಂಡಾಯವಾಗಿ ಸ್ಪರ್ಧಿಸುತ್ತೇನೆ ಎಂದು ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಅವರನ್ನು ನಾಳೆ‌ ಭೇಟಿಯಾಗಿ ಮಾತುಕತೆ ನಡೆಸುತ್ತೇವೆ ಎಂದ ಅವರು, ನನಗೆ ಟಿಕೆಟ್ ತಪ್ಪಲು ಹಣ ಮತ್ತು ಪ್ರಭಾವ ಎರಡು ಕಾರಣ ಎಂದು ಆರೋಪಿಸಿದ್ದಾರೆ. ನಾನು‌ 30ವರ್ಷಗಳಿಂದ ಎಷ್ಟು ಹಣ ಖರ್ಚುಮಾಡಿ ಪಕ್ಷ‌ ಕಟ್ಟಿದ್ದೇನೆ ಆದರೆ, ಈಗ ನನಗೆ ಅನ್ಯಾಯ ಆಗಿದೆ ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rajajinagar manjula naidu ಭದ್ರ ಕೋಟೆ ಬಂಡಾಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ