ಸರಿಯಾದ ಉದ್ಯೋಗ ಸಿಗದಿದ್ದಕ್ಕೆ ವ್ಯಕ್ತಿ ಆತ್ಮಹತ್ಯೆ

A person committed suicide for not getting a proper job

16-04-2018

ಬೆಂಗಳೂರು: ಉದ್ಯೋಗ ಅರಸಿ ಬಂದಿದ್ದ ವ್ಯಕ್ತಿಯೊಬ್ಬರು ಸರಿಯಾದ ಕೆಲಸ ಸಿಗದೇ ನೊಂದು ನೇಣಿಗೆ ಶರಣಾಗಿರುವ ದುರ್ಘಟನೆ ವರ್ತೂರಿನ ಕೊಡತಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಆಂಧ್ರ ಮೂಲದ ಜಾನಕಿರಾಮ್(32)ಎಂದು ಗುರುತಿಸಲಾಗಿದೆ. ಕೆಲಸ ಹುಡುಕಿಕೊಂಡು ಬಂದಿದ್ದ ಜಾನಕಿರಾಮ್ ಅವರು ಕೊಡತಿಯ ಡಿಎಕ್ಸ್ ಮ್ಯಾಕ್ಸ್ ಅಪಾರ್ಟ್‍ಮೆಂಟ್ ಉಳಿದುಕೊಂಡಿದ್ದರು. ಸರಿಯಾದ ಉದ್ಯೋಗ ಸಿಗದೇ ನೊಂದು ರಾತ್ರಿ 9ರ ವೇಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವರ್ತೂರು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

umemployement suicide ಅಪಾರ್ಟ್‍ಮೆಂಟ್ ತನಿಖೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ