ಖಾಲಿ ಸಿಲಿಂಡರ್ ಬದಲಾಯಿಸುವಾಗ ಎಚ್ಚರ

cylinder blast: while changing empty cylinder

16-04-2018 439

ಬೆಂಗಳೂರು: ಸಿಲಿಂಡರ್ ಬದಲಾಯಿಸುವ ವೇಳೆ ಬೆಂಕಿ ಹೊತ್ತಿಕೊಂಡು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ನಡೆದಿದೆ. ಲಗ್ಗೆರೆಯ ಮುನೇಶ್ವರ ಬ್ಲಾಕ್‍ನ ಗಾಯಗೊಂಡ ಮಹಾಲಕ್ಷ್ಮಿ(45) ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶೇ. 50 ರಷ್ಟು ಸುಟ್ಟಗಾಯಗಳಾಗಿರುವ ಅವರ ಸ್ಥಿತಿ ಚಿಂತಾನಕವಾಗಿದೆ. ಅವರ ಇಬ್ಬರು ಮಕ್ಕಳಾದ ಗಿರೀಶ್ ಹಾಗೂ ಲೋಕೇಶ್ ಯಾವುದೇ ಗಾಯಗಳಾಗದೇ ಅಪಾಯದಿಂದ ಪಾರಾಗಿದ್ದಾರೆ.

ಮನೆಯಲ್ಲಿ ಬೆಳಿಗ್ಗೆ 9ರ ವೇಳೆ ಖಾಲಿಯಾದ ಅಡುಗೆ ಸಿಲಿಂಡರ್ ಬದಲಾಯಿಸಿ ಖಾಲಿ ಸಿಲಿಂಡರ್ ಇಡಲಾಗಿತ್ತು. ಕೆಲಹೊತ್ತಿನಲ್ಲಿ ಖಾಲಿಯಾದ ಸಿಲಿಂಡರ್ನಲ್ಲಿ ಉಳಿದಿದ್ದ ಸ್ವಲ್ಪ ಗ್ಯಾಸ್ ಹೊರಬಂದು ಬೆಂಕಿ ಹೊತ್ತುಕೊಂಡು ಮತ್ತೊಂದು ಸಿಲಿಂಡರ್ಗೆ ತಗಲಿ ಬೆಂಕಿ ಜ್ವಾಲೆಯಾಗಿ ಹೊರಬರತೊಡಗಿದೆ.

ಬಾಗಿಲ ಬಳಿಯಿದ್ದ ಗಿರೀಶ್ ಹಾಗೂ ಲೋಕೇಶ್ ಹೊರಗಡೆ ಬಂದಿದ್ದು, ಒಳಗಿದ್ದ  ಬೆಂಕಿಯಿಂದ ತಪ್ಪಿಸಿಕೊಳ್ಳಲು ಬಚ್ಚಲು ಮನೆಗೆ ಹೋಗಿದ್ದು ಅಲ್ಲಿಗೂ ಬೆಂಕಿಯ ಜ್ವಾಲೆ ವ್ಯಾಪಿಸಿದೆ. ಮನೆಯ ಶೀಟ್‍ನ್ನು ಒಡೆದು ಮಹಾಲಕ್ಷ್ಮಿಯವರನ್ನು ಹೊರಗೆ ತರಲಾಯಿತಾದರೂ ಶೇ. 50 ರಷ್ಟು ಸುಟ್ಟು ಹೋಗಿದ್ದರು. ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದು, ನಂದಿನಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

cylinder cooking gas ಅಗ್ನಿಶಾಮಕ ಜ್ವಾಲೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ