ಕಾಮುಕನಿಗೆ ಯುವತಿಯಿಂದ ಕಪಾಳ ಮೋಕ್ಷ

4 boys misbehaved with lady: complained in facebook

16-04-2018

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಬೀದಿ ಕಾಮಣ್ಣರ ಹಾವಳಿ ಮುಂದುವರೆದಿದೆ. ನಗರದ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಯುವತಿಯೊಬ್ಬಳಿಗೆ 4ಜನ ಬೀದಿ ಕಾಮಣ್ಣರು ಮೈ ಕೈ ಮುಟ್ಟುವ ಮೂಲಕ ಅಸಭ್ಯ ವರ್ತನೆಯನ್ನು ತೋರಿದ್ದಾರೆ. ಕಾಮುಕರ ಕೃತ್ಯದಿಂದ ಆಕ್ರೋಶಗೊಂಡ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಯುವತಿಯು ಯುವಕನೊಬ್ಬನಿಗೆ ಕಪಾಳ ಮೋಕ್ಷವನ್ನು ಮಾಡಿದ್ದಾರೆ.

ಇದರಿಂದ ಕೆರಳಿದ ಪುಂಡರು ಟೆಕ್ಕಿ ಸಹದ್ಯೋಗಿಗಳ ಜೊತೆ ಗುಂಡಾವರ್ತನೆಯನ್ನು ತೋರಿದ್ದಾರೆ. ಕಾಮುಕರನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದರೂ ಸಹ ಜೀವನ್‍ ಭೀಮಾ ನಗರ ಪೊಲೀಸರು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಬರಲಿಲ್ಲ. ಸ್ಥಳಕ್ಕೆ ಬರದೇ ಇರುವುದರ ಬಗ್ಗೆಯೂ ಸಹ ಫೇಸ್ ಬುಕ್‍ನಲ್ಲಿ ಪೊಲೀಸರ ವಿರುದ್ಧ ``ಬೆಂಗಳೂರು ಪೊಲೀಸರು ಯುಸ್‍ಲೆಸ್'' ಎಂದು ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಬೀದಿ ಕಾಮಣ್ಣ ಅಸಭ್ಯ young lady software


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ