ದಾಖಲೆ ಇಲ್ಲದ ಐದೂವರೆ ಲಕ್ಷ ಹಣ ಜಪ್ತಿ

DCP kala krishnaswamy seized illegal 5 .5 lakh of money

16-04-2018 567

ಬೆಂಗಳೂರು: ಕಾರಿನಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 5ಲಕ್ಷ 60 ಸಾವಿರಹಣವನ್ನು ದೇವನಹಳ್ಳಿ ಟೋಲ್‍ನ ಚೆಕ್‍ಪೋಸ್ಟ್ ಬಳಿ ತಪಾಸಣೆ ನಡೆಸಿದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚೆಕ್‍ಪೋಸ್ಟ್ ಬಳಿ ಬೆಳಿಗ್ಗೆ 9ರ ವೇಳೆ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು ಮಾರುತಿ ರಿಡ್ಜ್ ಕಾರನ್ನು ತಡೆದು ತಪಾಸಣೆ ನಡೆಸಿದಾಗ ದಾಖಲೆಯಿಲ್ಲದ 2 ಲಕ್ಷ ಹಣ ಪತ್ತೆಯಾಗಿದೆ. ಕಾರಿನಲ್ಲಿದ್ದವರು ಹಣವನ್ನು ವ್ಯಾಪಾರಕ್ಕೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.

ವಾಹನ ತಪಾಸಣೆ ಮುಂದುವರೆಸಿದಾಗ ಬೆಳಿಗ್ಗೆ 10ರ ವೇಳೆ ಬಂದ ಸ್ಯಾಂಟ್ರೋ ಕಾರಿನಲ್ಲಿ 3.6 ಲಕ್ಷ ಪತ್ತೆಯಾಗಿದ್ದು ಅದಕ್ಕೂ ಕೂಡ ಯಾವುದೇ ದಾಖಲಾತಿಗಳು ಲಭ್ಯವಾಗಿಲ್ಲ, ಕಾರಿನಲ್ಲಿದ್ದವರು ಹಣವನ್ನು ಕೂಲಿ ಕಾರ್ಮಿಕರಿಗೆ ಕೂಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

devanahalli check post ತಪಾಸಣೆ ವಿಚಾರಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ