ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ಆಂಧ್ರ ಬಂದ್

Andhra pradesh Bandh: demanding for special status

16-04-2018

ಹೈದರಾಬಾದ್: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಇಂದು ಪ್ರತ್ಯೇಕ ಹೋದಾ ಸಾಧನ ಸಮಿತಿ ಆಂಧ್ರ ಪ್ರದೇಶ ಬಂದ್​ ಮಾಡಿ ಪ್ರತಿಭಟಿಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕರ್ನಾಟಕದಿಂದ, ಆಂಧ್ರಪ್ರದೇಶಕ್ಕೆ ತೆರಳುವ ಬಸ್​ಗಳು ಆಂಧ್ರದ ಗಡಿಯವರೆಗೆ ಮಾತ್ರ ತೆರಳಲಿವೆ, ಈ ಬಗ್ಗೆ ಮಾಹಿತಿ ನೀಡಿರುವ ಕೆಎಸ್​ಆರ್​ಟಿಸಿ ಅಧಿಕಾರಿಗಳು ಆಂಧ್ರದಲ್ಲಿ ಬಂದ್​ ಇರುವ ಕಾರಣ ರಾಜ್ಯದ ಯಾವ ಬಸ್​ಗಳು ಆಂಧ್ರಕ್ಕೆ ತೆರಳುವುದಿಲ್ಲ, ಗಡಿಯವರೆಗೆ ಮಾತ್ರ ತೆರಳಲಿವೆ ಎಂದು ತಿಳಿಸಿದ್ದಾರೆ.

ಈಗಾಗಲೇ ಆಂಧ್ರದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಎರಡು ಕಡೆ ಬೈಕ್​ಗಳಿಗೆ ಬೆಂಕಿ ಹಚ್ಚಲಾಗಿದೆ. ಹಲವೆಡೆ ಬಸ್​ಗಳ ಮೇಲೆ ಕಲ್ಲು ತೂರಾಟ ಕೂಡ ನಡೆದಿದೆ. ಇಂದಿನ ಬಂದ್​ಗೆ ವೈಎಸ್​ಆರ್ ​ಕಾಂಗ್ರೆಸ್​, ಜನಸೇನಾ ಸೇರಿದಂತೆ ಹಲವು ವಿಪಕ್ಷಗಳು ಬೆಂಬಲ ಸೂಚಿಸಿವೆ. ಜನರು ಕೂಡ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನ ಬಂದ್​ ಮಾಡಿ ಬೆಂಬಲ ಸೂಚಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ