ಟಿಕೆಟ್ ಆಕಾಂಕ್ಷಿ: ಬಾಬಾಸಾಹೇಬ್ ಬೆಂಬಲಿಗರ ಎಚ್ಚರಿಕೆ

ticket aspirant: Babasaheb supporters warned  if not give ticket to babasaheb

16-04-2018

ಬೆಳಗಾವಿ: ಕಿತ್ತೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗದ ಹಿನ್ನೆಲೆ, ಬಾಬಾಸಾಹೇಬ್ ಪಾಟೀಲ್ ಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಬಾಬಾಸಾಹೇಬ್ ಪಾಟೀಲ್ ಬೆಳಗಾವಿಯ ಕಿತ್ತೂರು ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಟಿಕೆಟ್ ನೀಡುವಂತೆ ಒತ್ತಾಯಿಸಿ ಪಟ್ಟಣದ ಕಿತ್ತೂರು ಚೆನ್ನಮ್ಮ ವೃತ್ತದ ಬಳಿ ಇನ್ನೂರಕ್ಕೂ ಅಧಿಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಹಾಲಿ ಶಾಸಕ ಡಿಬಿ ಇನಾಮದಾರ್ ಮತ್ತು ಅಳಿಯ ಬಾಬಾಸಾಹೇಬ್ ನಡುವೆ ಟಿಕೆಟ್ಗಾಗಿ‌ ಪೈಪೋಟಿ ಏರ್ಪಟ್ಟಿದೆ. ನಿನ್ನೆ ಸಂಜೆ ಡಿಬಿ ಇನಾಮದಾರ್ ಬೆಂಬಲಿಗರು ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ವಿರೋಧವಾಗಿ ಮಧ್ಯರಾತ್ರಿ ಮಳೆಯ ನಡುವೆಯೂ ಬಾಬಾಸಾಹೇಬ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

kittur babasaheb patil ಬೆಂಕಿ ಹಚ್ಚಿ ಪ್ರತಿಭಟನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ