'ಓಟುಗಳು ಕುಮಾರಸ್ವಾಮಿ ಜೇಬಿನಲ್ಲಿಲ್ಲ'-ಸಿಎಂ16-04-2018

ಮೈಸೂರು: ಸಿಎಂ ಸಿದ್ದರಾಮಯ್ಯ ಪ್ರಚಾರ ಮಾಡಿದರೂ ನನ್ನನ್ನು ಸೋಲಿಸಲಾಗಲ್ಲ ಅನ್ನೊ ಹೆಚ್.ಡಿ ಕುಮಾರ ಸ್ವಾಮಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಈ ರೀತಿ ಹೇಳಿಕೆ ನೀಡಬಾರದು. ಓಟ್ಗಳು ಕುಮಾರಸ್ವಾಮಿ ಜೇಬಿನಲ್ಲಿಲ್ಲ ಎಂದು ಕಿಡಿಕಾರಿದ್ದಾರೆ. ಮೊಯ್ಲಿ ವಿರುದ್ಧ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಸೋತಾಗ ಎಲ್ಲಿ ಹೋಗಿದ್ರು. ಪ್ರಜಾಪ್ರಭುತ್ವದಲ್ಲಿ ಯಾರು ಗೆಲ್ಲಬೇಕು ಸೋಲಬೇಕು ಅನ್ನೋದನ್ನ ಜನ ತೀರ್ಮಾನ ಮಾಡ್ತಾರೆ ಎಂದರು.

ಬಾದಾಮಿಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ, ಇಷ್ಟು ಬಾರಿ ಸ್ಪರ್ಧೆ ಮಾಡಿದರೂ,ಯಾವಾಗಲು 2ಕಡೆ ಸ್ಪರ್ಧೆ ಮಾಡಿಲ್ಲ. ನಾನು ಚಾಮುಂಡೇಶ್ಚರಿ ಒಂದರಲ್ಲೇ ಸ್ಪರ್ಧೆ ಮಾಡೋದು ಎಂದು ಹೇಳಿದರು. ಚಾಮುಂಡೇಶ್ವರಿಯಲ್ಲೇ ಸಿದ್ದರಾಮಯ್ಯಗೆ ಮೋಕ್ಷ ನೀಡೋದಾಗಿ ಹೆಚ್ಡಿಕೆ ಹೇಳಿಕೆಗೆ, ಈ ರೀತಿ ಹೇಳಿಕೆಗಳನ್ನ ನೀಡಬಾರದು ಎಂದು ಹೇಳಿದರು. ಇನ್ನು ಚಾಮುಂಡೇಶ್ಚರಿ ಕ್ಷೇತ್ರದಲ್ಲಿ ಕುಮಾರಸ್ವಾಮಿ ಪ್ರಚಾರ ವಿಚಾರದ ಕುರಿತು, ಉಪ ಚುನಾವಣೆಯಲ್ಲೂ ಕುಮಾರಸ್ವಾಮಿ ಚಾಮುಂಡೇಶ್ಚರಿಯಲ್ಲಿ ಪ್ರಚಾರ ಮಾಡಿದರು, ಆದರೆ ಗೆದ್ದಿದ್ದು ಮಾತ್ರ ನಾನೇ, ಈಗಲೂ ಆದೇ ರೀತಿಯಾಗುತ್ತೆದೆ ಎಂದು ನುಡಿದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ