ಚಾಮುಂಡೇಶ್ವರಿಯಲ್ಲಿ ಸಿಎಂಗೆ-ಮಹದೇವಪ್ಪ ಸಾಥ್

CM Siddaramaiah and H.C.Mahadevappa together campaign in chamundeshwari

16-04-2018

ಮೈಸೂರು: ಇದೇ ಮೊದಲ ಬಾರಿಗೆ ಸಿಎಂ ಜೊತೆ ಪ್ರಚಾರದ ಅಖಾಡಕ್ಕಿಳಿದ ಸಚಿವ ಹೆಚ್.ಸಿ ಮಹದೇವಪ್ಪ, ಚಾಮುಂಡೇಶ್ವರಿಯಲ್ಲಿ ಮೂರನೇ ಹಂತದ ಮತ ಭೇಟೆಗೆ ಸಾಥ್ ನೀಡಿದ್ದಾರೆ. ಪುತ್ರನ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮುನಿಸಿಕೊಂಡಿದ್ದ ಮಹದೇವಪ್ಪ ಅವರನ್ನು ಪುತ್ರನಿಗೆ ಟಿಕೆಟ್ ಬೇಡ, ನೀನೇ ನಿಲ್ಲು ಎಂದು ಮನವೊಲಿಸಿರುವುದಾಗಿ ಹೇಳಲಾಗುತ್ತಿದ್ದು, ನಗು ಮುಖದೊಂದಿಗೆ ಸಿಎಂ ಪ್ರಚಾರಕ್ಕೆ ಸಾಥ್ ನೀಡಿದ್ದಾರೆ. ಲಿಂಗಾಂಬುಧಿ ಪಾಳ್ಯದ ಸಿದ್ದಪಾಜಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ ಸಿಎಂ ಪ್ರಚಾರ ಕಾರ್ಯ ಆರಂಭಿಸಿದರು. ಈ ವೇಳೆ ವಿಜಯಶಂಕರ್, ಪರಿಷತ್ ಸದಸ್ಯ ಧರ್ಮ ಸೇನಾ, ಮಾಜಿ ಶಾಸಕ ಸತ್ಯಪ್ಪ ಸೇರಿ ಹಲವರು ಸಿಎಂ ಜೊತೆಗಿದ್ದರು.


ಸಂಬಂಧಿತ ಟ್ಯಾಗ್ಗಳು

siddaramaiah H.C.Mahadevappa ವಿಜಯಶಂಕರ್ ಪರಿಷತ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ