ಬಿಜೆಪಿಯಲ್ಲೇ ಉಳಿಯಲು ನಿರ್ಧರಿಸಿದ ಎನ್ ಆರ್ ರಮೇಶ್

NR Ramesh decided to stay in the BJP

16-04-2018

ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿಯ ಮಾಜಿ ಕಾರ್ಪೊರೇಟರ್ ಎನ್.ಆರ್.ರಮೇಶ್ ಟಿಕೆಟ್ ಸಿಗದಿದ್ದಾಗ ವಿಪರೀತವಾಗಿ ಪ್ರತಿಭಟಿಸಿದ್ದರು. ಹಿಂದಿನಿಂದಲೂ ಆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ರಮೇಶ್ ತಮಗೇ ಆ ಕ್ಷೇತ್ರದ ಟಿಕೆಟ್ ಸಿಗುವುದಾಗಿ ಹೇಳಿಕೊಂಡಿದ್ದರು. ಅದಲ್ಲದೆ ತಮ್ಮ ಹೆಂಡತಿ ಕಾರ್ಪೊರೇಟರ್ ಆಗಿರುವ ಯಡಿಯೂರ್ ವಾರ್ಡ್ ಉಸ್ತುವಾರಿಯನ್ನು ವಹಿಸಿಕೊಳ್ಳುವುದರ ಜೊತೆಗೆ ಪಕ್ಷದ ನಾಯಕರು ಚಿಕ್ಕಪೇಟೆಯಲ್ಲೂ ಕೆಲಸ ಮಾಡಲು ಹೇಳಿದ್ದರಿಂದ ಅಲ್ಲೂ ತಮ್ಮ ಹವಾ ಮೂಡಿಸಲು ಪ್ರಯತ್ನಿಸಿದ್ದರು. ಚಿಕ್ಕಪೇಟೆಯ ಶಾಸಕ ಫ್ಲೆಕ್ಸ್ ಶೂರ ಆರ್.ವಿ.ದೇವರಾಜ್ ಅವರನ್ನು ನಾಚಿಸುವಂತೆ ತಮ್ಮ ಹುಟ್ಟು ಹಬ್ಬಕ್ಕೆ ಆ ಕ್ಷೇತ್ರದಾದ್ಯಂತ ಫ್ಲೆಕ್ಸ್ ಹಾಕಿಸಿದ್ದರು. ಟಿಕೆಟ್ ತಮಗೆ ಸಿಗದೆ ಉದ್ಯಮಿ ಉದಯ್ ಗರುಡಾಚಾರ್ ಅವರಿಗೆ ಹೋದಮೇಲೆ ಮುನಿಸಿಕೊಂಡ ರಮೇಶ್ ತಮ್ಮ ಬೆಂಬಲಿಗರನ್ನು ಪ್ರತಿಭಟನೆಗೆ ಇಳಿಸಿದ್ದರು. ಆನಂತರ ಟಿಕೆಟ್ ಕೊಡದಿದ್ದರೆ ಜೆಡಿಎಸ್ಗೆ ಹೋಗುವುದಾಗಿ ಕೂಡ ಧಮ್ಕಿ ಹಾಕಿದ್ದರು. ಆದರೆ ಇದೆಲ್ಲದಕ್ಕೆ ಪಕ್ಷದ ನಾಯಕರು ಜಗ್ಗದಿದ್ದಾಗ ಪರಿಸ್ಥಿತಿಯ ಅರಿವಾಗಿ ಪಕ್ಷದಲ್ಲೇ ಉಳಿದುಕೊಳ್ಳುವ ನಿರ್ಧಾರ ಮಾಡಿದ್ದಾರಂತೆ. ಬಿಜೆಪಿಯಲ್ಲಿದ್ದವರು ಪಕ್ಷ ಬಿಟ್ಟು ಹೋದ ಮೇಲೆ ಅವರ ಪರಿಸ್ಥಿತಿ ಅಯೋಮಯವಾಗಿರುವ ಅನೇಕ ಉದಾಹರಣೆಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವ ರಮೇಶ್ ಬಿಜೆಪಿ ಬಿಟ್ಟರೆ ತಮಗೆ ಉಳಿಗಾಲವಿಲ್ಲವೆಂದು ನಿರ್ಧರಿಸಿದಂತಿದೆ. ಅದರೊಂದಿಗೆ ಪಕ್ಷದ ಕೆಲವು ನಾಯಕರೂ ಕೂಡ 'ಎಲ್ಲಿ ಹೋಗ್ತಾರೆ? ಇಲ್ಲೇ ಇರ್ತಾರೆ ಬಿಡಿ' ಅಂತ ಅಸಡ್ಡೆಯಿಂದ ಹೇಳುತ್ತಿರುವುದು ಬಿಜೆಪಿ ಬಿಡುತ್ತೇನೆ ಎಂದು ಹೇಳಿದ ರಮೇಶ್ ಅವರ ಭವಿಷ್ಯಕ್ಕೆ ಕೈಗನ್ನಡಿಯಂತಿದೆ ಎಂದು ಹೇಳಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

N.R Ramesh corporator ಭವಿಷ್ಯ ಹೆಂಡತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ