‘ಮೌಢ್ಯಗಳ ತಿರಸ್ಕಾರದಿಂದ ಮಾತ್ರ ಸಮಾನತೆ’14-04-2018

ಬೆಂಗಳೂರು: ಸಮಾನತೆಯ ಪರಿಕಲ್ಪನೆ ಅತ್ಯಂತ ಯಶಸ್ವಿಯಾಗಿ ಅನುಷ್ಠಾನ ಮಾಡಿದವರು ಬಿ.ಆರ್.ಅಂಬೇಡ್ಕರ್ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಯಾವುದೇ ಒಂದು ದೇಶದ ಪ್ರತಿಯೊಬ್ಬ ವ್ಯಕ್ತಿಗೆ ಆತ್ಮಗೌರವ ಪ್ರಾಪ್ತಿ ಆದಾಗ ಮಾತ್ರ ಒಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಹಾಗೆ.

ಒಂದು ವ್ಯಕ್ತಿಗೆ ಸಿಗುವ ರಾಜಕೀಯ ಸ್ಥಾನಮಾನಗಳಿಂದ ಸಮಾನತೆ ಆಗೋದಿಲ್ಲ, ಧರ್ಮ, ಶಾಸನಗಳು ಮೌಢ್ಯಗಳನ್ನು ತಿರಸ್ಕಾರ ಮಾಡಿದಾಗ ಮಾತ್ರ ಸಮಾನತೆ ಬರುತ್ತದೆ ಎಂದು ಎಂದು ಅಂಬೇಡ್ಕರ್ ಹೇಳುತ್ತಿದ್ದರು.

ಶಾಸನ, ಧರ್ಮಗಳಲ್ಲಿನ ಮೌಢ್ಯ ಹೋಗೋವರೆಗೂ ಸಮಾನತೆ ಬರಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಪ್ರತಿಪಾದಿಸಿದರು‌, ಹೀಗಾಗಿ ಎಲ್ಲ ಧರ್ಮಗಳ ಅಧ್ಯಯನ ಮಾಡಿ, ಕೊನೆಗೆ ‌ಬೌದ್ಧ ಧರ್ಮ ಸೇರ್ಪಡೆಯಾದರು.‌ ಸಮಾನತೆ, ಪ್ರೀತಿ, ನ್ಯಾಯ, ಭ್ರಾತೃತ್ವಗಳುಳ್ಳ ಧರ್ಮ ಅಂದರೆ ಬೌಧ್ದ ಧರ್ಮ ಅಂತ ಅಂಬೇಡ್ಕರ್ ನಂಬಿದರು. ಎಂದು ಸದಾನಂದ ಗೌಡ ಹೇಳಿದರು.


ಸಂಬಂಧಿತ ಟ್ಯಾಗ್ಗಳು

B.R.Ambedkar D.V.Sadananda Gowda ತಿರಸ್ಕಾರ ಆತ್ಮಗೌರವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ