'ಜಗತ್ತು ಕಂಡ ಮಹಾನ್ ವ್ಯಕ್ತಿ ಅಂಬೇಡ್ಕರ್'-ಜಾರ್ಜ್14-04-2018

ಬೆಂಗಳೂರು: ಜಗತ್ತು ಕಂಡಂತಹ ಮಹಾನ್ ವ್ಯಕ್ತಿ ಡಾ||ಬಿ.ಆರ್.ಅಂಬೇಡ್ಕರ್ ಎಂದು, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಬಿ.ಆರ್.ಅಂಬೇಡ್ಕರ್ ಜನ್ಮದಿನ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನ ನಮ್ಮ ಪಕ್ಷದಲ್ಲಿ ಆಚರಿಸುತ್ತಿರೋದು ನಮ್ಮ ಪುಣ್ಯ ಎಂದಿದ್ದಾರೆ.

ಅಂಬೇಡ್ಕರ್ ಅವರ ಆಶಯವನ್ನ ನಮ್ಮ ಪಕ್ಷ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಯಾವುದೇ ಜಾತಿ ಬೇಧ ಇಲ್ಲದೆ, ಎಲ್ಲಾ ಧರ್ಮದವರು ನಮ್ಮ ಪಕ್ಷದಲ್ಲಿದ್ದಾರೆ. ಆದರೆ ಬಿಜೆಪಿ, ಭಜರಂಗದಳ, ಆರ್.ಎಸ್.ಎಸ್ ನವರು ನಮ್ಮದು ಆ ಜಾತಿ, ಈ ಜಾತಿ ಅಂತ ಬೇಧ ಭಾವ ಮೂಡಿಸುತ್ತಾರೆ. ನಾವೆಲ್ಲರೂ‌ ಒಂದೇ ಅನ್ನೋ ಮನೋಭಾವ ಅವರಲ್ಲಿಲ್ಲ. ಅದ್ದರಿಂದ ಬಿಜೆಪಿಯವರಿಗೆ ನಾವು ಬುದ್ಧಿ ಹೇಳಬೇಕಿದೆ ಎಂದು ಹೇಳಿದರು.

ನಮ್ಮ ಸರ್ಕಾರದಲ್ಲಿ ಯಾವುದೇ ಒಂದು ಹಗರಣ ಇಲ್ಲ. ಅಂಬೇಡ್ಕರ್ ಜಯಂತಿ ದಿನ ನಾವೆಲ್ಲರೂ ಘೋಷಣೆ ಮಾಡಿ ಹೇಳುತ್ತೇವೆ ಅಂಬೇಡ್ಕರ್ ಕನಸನ್ನು ನಾವು ನನಸು ಮಾಡುತ್ತೇವೆ ಎಂದರು.


ಸಂಬಂಧಿತ ಟ್ಯಾಗ್ಗಳು

K.J.George Constitution ಅಂಬೇಡ್ಕರ್ ಭಜರಂಗದಳ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ