ಇರಾನಿ ಗ್ಯಾಂಗ್ ನ ಇಬ್ಬರ ಬಂಧನ

two of irani gang thieves arrested

14-04-2018

ಬೆಂಗಳೂರು: ಹೆಣ್ಣೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕುಖ್ಯಾತ ಇರಾನಿ ಗ್ಯಾಂಗ್ ಕಳ್ಳರನ್ನು ಬಂಧಿಸಿದ್ದಾರೆ. ಫರ್ಮಾನ್ ಅಲಿ ಹಾಗೂ ಬಾಕರ್ ಅಲಿ ಎಂಬಿಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳಿಂದ ಸುಮಾರು 1 ಕೆಜಿ 83 ಗ್ರಾಂ ಚಿನ್ನ ಸೇರಿದಂತೆ 31 ಲಕ್ಷದ 92 ಸಾವಿರ ನಗದು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಒಬ್ಬಂಟಿ ಮಹಿಳೆಯರನ್ನು ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದ್ದರು.

ನಿರ್ಜನ ಪ್ರದೇಶದಲ್ಲಿ ಅಗಾಗ ಓಡಾಡೋ ದ್ವಿಕಚಕ್ರ ಹಾಗೂ ಕಾರ್ ಗಳನ್ನು ಅಡ್ಡಗಟ್ಟಿ ಹಾಗೂ ಮನೆಗೆ ನುಗ್ಗಿ ಚಾಕು ತೋರಿಸಿ ಚಿನ್ನ ಹಾಗೂ ಹಣ ದೋಚುತ್ತಿದ್ದರು. ಈ ಸಂಬಂಧ ಆರೋಪಿಗಳ ವಿರುದ್ಧ ನಗರದ ಬೆರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಸುಮಾರು 22 ಪ್ರಕರಣಗಳ ದಾಖಲಾಗಿತ್ತು. ಇವರು ದೇಶದ ಇತರೆ ರಾಜ್ಯಗಳಲ್ಲಿ ಅಪರಾಧ ನಡೆಸಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ಇವರ ಮೂಲಕ ಸಂಪೂರ್ಣ ಇರಾನಿ ಗ್ಯಾಂಗನ್ನು ಮಟ್ಟ ಹಾಕುವ ಬಗ್ಗೆ ಯೋಜನೆ ಹೂಡಿ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

irani gang arrested ಅಪರಾಧ ಯೋಜನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ