‘ಸಮೀಕ್ಷೆಗಳನ್ನು ಬಿಜೆಪಿ ನಂಬಲ್ಲ’-ಈಶ್ವರಪ್ಪ14-04-2018

ಶಿವಮೊಗ್ಗ: ಜಿಲ್ಲೆಯ ವಿವಿಧ ಮಠಗಳಿಗೆ ಭೇಟಿ ನೀಡಿ, ನಂತರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಷಾ ರಾಜ್ಯ ಪ್ರವಾಸ ನಡೆಸುತ್ತಿದ್ದಾರೆ. ರಾಜ್ಯಕ್ಕೆ ಚಾಣಕ್ಯ ಅಮಿತ್ ಷಾ ಮಾತ್ರ ಬಂದಿರುವುದಷ್ಟೆ ಇನ್ನೂ ಚಂದ್ರಗುಪ್ತ ನರೇಂದ್ರ ಮೋದಿ ರಾಜ್ಯಕ್ಕೆ ಬರುವವರಿದ್ದಾರೆ. ಅವರಿಬ್ಬರ ನಾಯಕತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮುಂದಿನ ಸಿಎಂ ಯಡಿಯೂರಪ್ಪ ಆಗುತ್ತಾರೆ ಎಂದು ನುಡಿದಿದ್ದಾರೆ.

ಸಮೀಕ್ಷೆಯನ್ನು ಬಿಜೆಪಿ ನಂಬಲ್ಲ, ಹಿಂದಿನ ಸಮೀಕ್ಷೆಯನ್ನು ಸುಳ್ಳು ಮಾಡಿ ಬಿಜೆಪಿ ಉತ್ತರ ಭಾರತದ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ. ಬಿಜೆಪಿಯಲ್ಲಿ ಸಣ್ಣ ಪುಟ್ಟ ಭಿನ್ನಮತವನ್ನು ಬಗೆ ಹರಿಸಲಾಗುವುದು. ಮೂಳಕಾಲ್ಮೂರಿನ ಭಿನ್ನಮತವನ್ನು ಕಾಂಗ್ರೆಸ್ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.


ಸಂಬಂಧಿತ ಟ್ಯಾಗ್ಗಳು

K.S.Eshwarappa Survey ದುರುಪಯೋಗ ಉತ್ತರ ಭಾರತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ