ಅಪಘಾತ: ವಿದೇಶಿ ಪ್ರಜೆಗೆ ಜೈಲು ಶಿಕ್ಷೆ

Accident: A foreign citizen is sentenced to prison

14-04-2018

ಮಂಡ್ಯ: ಅಪಘಾತ ಪ್ರಕರಣವೊಂದರಲ್ಲಿ ವಿದೇಶಿ ಪ್ರಜೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜೆಎಂಎಫ್ ಸಿ  ನ್ಯಾಯಾಲಯ ಈ ಆದೇಶ ನೀಡಿದೆ. ಕಳೆದ 2017ರ ಡಿಸೆಂಬರ್ ನಲ್ಲಿ ಶ್ರೀರಂಗಪಟ್ಟಣದಲ್ಲಿ ನಡೆದಿದ್ದ ಅಪಘಾತ ಪ್ರಕರಣ ಇದಾಗಿದೆ. ಇಸ್ರೆಲ್ ನ ವಾಸ್ರನ್ ಮೆಲ್ ಆಲ್ ಮೋಘ್(22) ಶಿಕ್ಷೆಗೆ ಗುರಿಯಾದ ವಿದೇಶಿ ಪ್ರಜೆ.

ಅಂತರಾಷ್ಟ್ರೀಯ ಚಾಲನಾ ಪರವಾನಗಿ ಇಲ್ಲದೆ ಬಾಡಿಗೆ ಬೈಕ್ ಪಡೆದು ಶ್ರೀರಂಗಪಟ್ಟಣದಲ್ಲಿ ಅಪಘಾತ ಮಾಡಿದ್ದ. ಘಟನೆಯಲ್ಲಿ ಗಣಂಗೂರು ಗ್ರಾಮದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದನು. ಇದೀಗ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2.2 ವರ್ಷ ಜೈಲು ಮತ್ತು 10.500ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.


ಸಂಬಂಧಿತ ಟ್ಯಾಗ್ಗಳು

foreigner Accident ನ್ಯಾಯಾಲಯ ಅಂತರಾಷ್ಟ್ರೀಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ