ಆಕಾಶವಾಣಿ-ದೂರದರ್ಶನದಲ್ಲಿ ಭಾಷಣಕ್ಕೆ ಅವಕಾಶ

karnataka election: political parties can speech in akashvani-doordarshan

13-04-2018

ಬೆಂಗಳೂರು: ರಾಜ್ಯದ ವಿಧಾನಸಭಾ ಸಾರ್ವತ್ರಿಕ ಚುನಾವಣಾ ಅವಧಿಯಲ್ಲಿ ಅಂಗೀಕೃತ ರಾಷ್ಟ್ರೀಯ ಹಾಗೂ ಪ್ರಾದೇಶಿಕ ರಾಜಕೀಯ ಪಕ್ಷಗಳಿಗೆ ಸಾರ್ವಜನಿಕ ಸ್ವಾಮ್ಯದ ದೂರದರ್ಶನ ಮತ್ತು ಆಕಾಶವಾಣಿಗಳಲ್ಲಿ ಪ್ರಸಾರ ಭಾಷಣ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.

ಈ ಪ್ರಸಾರ ಭಾಷಣಕ್ಕೆ ರಾಜಕೀಯ ಪಕ್ಷಗಳು ಯಾವುದೇ ಶುಲ್ಕ ಭರಿಸಬೇಕಾಗಿಲ್ಲ. ಮಹಾ ಚುನಾವಣೆಗಳಲ್ಲಿ ಮುಕ್ತವಾಗಿ ಪ್ರಸಾರ ಭಾಷಣ ಮಾಡುವ ಯೋಜನೆಯನ್ನು 1998ರಲ್ಲಿ ಚುನಾವಣಾ ಆಯೋಗ ಜಾರಿಗೆ ತಂದಿದ್ದು, ಅದು ಸಾರ್ವತ್ರಿಕ ಚುನಾವಣೆಗಳಲ್ಲೂ ಅನುಷ್ಠಾನಗೊಳ್ಳುತ್ತಿದೆ.

ಬೆಂಗಳೂರಿನಲ್ಲಿರುವ ಆಕಾಶವಾಣಿ ಮತ್ತು ದೂರದರ್ಶನಗಳ ಪ್ರಾಂತೀಯ ಕೇಂದ್ರಗಳು ರಾಜಕೀಯ ಪಕ್ಷಗಳ ವಿಧಾನಸಭಾ ಚುನಾವಣಾ ಪ್ರಸಾರ ಭಾಷಣವನ್ನು ಸಂಯೋಜನೆ, ಪ್ರಸಾರ ಮಾಡುತ್ತದೆ. ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ಪ್ರಾದೇಶ ಪಕ್ಷಗಳಿಗೆ ಒಟ್ಟಾರೆ ತಲಾ 45 ನಿಮಿಷ ಭಾಷಣಕ್ಕೆ ಅನುವು ಮಾಡಲಾಗಿದೆ.

ಆದರೆ, ಒಂದು ಬಾರಿಗೆ 15 ನಿಮಿಷಕ್ಕಿಂತ ಹೆಚ್ಚು ಅವಧಿಗೆ ಅವಕಾಶ ಇರುವುದಿಲ್ಲ. ರಾಜಕೀಯ ಪಕ್ಷಗಳ ಚುನಾವಣಾ ಪ್ರಸಾರ ಭಾಷಣದ ದಿನ ಮತ್ತು ಸಮಯವನ್ನು ಪ್ರಸಾರ ಭಾರತಿ ನಿಗಮ ಚುನಾವಣಾ ಆಯೋಗದ ಸಲಹೆ ಪಡೆದು ನಿರ್ಧರಿಸುತ್ತದೆ. ಈ ಚುನಾವಣಾ ಪ್ರಸಾರ ಭಾಷಣ, ನಾಮಪತ್ರಗಳ ಸಂದಾಯದ ಕೊನೆ ದಿನಾಂಕ ಮತ್ತು ಮತದಾನಕ್ಕೆ ಎರಡು ದಿವಸ ಮುಂಚೆ ಬಿತ್ತರಗೊಳ್ಳುತ್ತದೆ. ಜೊತೆಗೆ, ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಗರಿಷ್ಠ ತಲಾ ಎರಡು ಚುನಾವಣಾ ಚರ್ಚೆಗೂ ಪ್ರಸಾರಭಾರತಿ ನಿಗಮ ಏರ್ಪಾಟು ಮಾಡುತ್ತದೆ. ಅರ್ಹ ರಾಜಕೀಯ ಪಕ್ಷಗಳ ತಮ್ಮ ಪ್ರತಿನಿಧಿಯನ್ನು ಚರ್ಚೆಗೆ ನಿಯೋಜಿಸಬಹುದು.


ಸಂಬಂಧಿತ ಟ್ಯಾಗ್ಗಳು

akashvani doordarshan ರಾಜಕೀಯ ಪ್ರತಿನಿಧಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ