'ಹೆಬ್ಬೆಟ್ ರಾಮಕ್ಕ’ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ

65th national film awards announced

13-04-2018

ಬೆಂಗಳೂರು: 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ದೆಹಲಿಯಲ್ಲಿ ಇಂದು ಪ್ರಕಟಿಸಲಾಯಿತು. ನಾನ್‍ಫೀಚರ್ ವರ್ಗದಲ್ಲಿ ವಾಟರ್‍ಬೇಬಿ ಸರ್ವಶ್ರೇಷ್ಠ ಚಿತ್ರ ಎನ್ನುವ ಪ್ರಶಸ್ತಿಗೆ ಭಾಜನವಾಗಿದೆ.

ಅತ್ಯುತ್ತಮ ಸಿನಿಮಾ ವಿಮರ್ಶಕ ಪುರಸ್ಕಾರಕ್ಕೆ ಗಿರಿಧರ್ ಝಾ ಆಯ್ಕೆಯಾಗಿದ್ದಾರೆ. 22 ಶ್ರೇಣಿಗಳಲ್ಲಿ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು. ಈ ವೇಳೆ ಮಾತನಾಡಿದ ಆಯ್ಕೆ ಸಮಿತಿಯ ಅಧ್ಯಕ್ಷರಾದ ಶೇಖರ್ ಕಪೂರ್ ಭಾರತದಲ್ಲಿ ಚಲನಚಿತ್ರ ನಿರ್ಮಾಪಕರು ಹೊಸ ವಿಚಾರಧಾರೆಗಳನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ, ಜಾಗತಿಕ ಗುಣಮಟ್ಟದ ಚಿತ್ರಗಳ ನಿರ್ಮಾಣಕ್ಕೆ ಪ್ರಯತ್ನಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅತ್ಯುತ್ತಮ ಕನ್ನಡ ಚಿತ್ರ ಹೆಬ್ಬೆಟ್ ರಾಮಕ್ಕ, ಬೆಂಗಾಲಿ ಚಿತ್ರ ಮಯೂರಾಕ್ಷಿ, ಲಡಾಕಿ ಚಿತ್ರ ವಾಕಿಂಗ್ ವಿತ್ ದ ವಿಂಡ್, ತುಳು ಚಿತ್ರ ಪಡ್ಡಾಯಿ, ಮರಾಠಿ ಚಿತ್ರ ಕಚ್ಚಾ ಲಿಂಬು, ಒಡಿಯಾ ಚಿತ್ರ ಹೆಲೋ ಆರ್‍ಸಿ, ತಮಿಳು ಚಿತ್ರ ಟುಲೆಟ್, ಹಿಂದಿ ಚಿತ್ರ ನ್ಯೂಟನ್, ಅಸ್ಸಾಮಿ ಚಿತ್ರ ಇಶು, ಅತ್ಯುತ್ತಮ ಆಕ್ಷನ್ ಚಿತ್ರ ಬಾಹುಬಲಿ ಆಯ್ಕೆಯಾಗಿವೆ. ಮಾಮ್ ಚಿತ್ರದ ಮನೋಜ್ಞ ನಟನೆಗಾಗಿ ದಿವಂಗತ ಶ್ರೀದೇವಿ ಅವರಿಗೆ ಅತ್ಯುತ್ತಮ ನಟಿ ಪುರಸ್ಕಾರ ಘೋಷಿಸಲಾಗಿದೆ. ಚಲನಚಿತ್ರರಂಗಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿರುವ ಗಣ್ಯರಿಗೆ ನೀಡುವ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ದಿವಂಗತ ನಟ ವಿನೋದ್ ಖನ್ನಾ ಅವರಿಗೆ ಪ್ರಕಟಿಸಲಾಗಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


3737dhgdhd
  • Dhdh
  • Professional
37373677
  • 3737
  • Professional