ಮಾಧ್ಯಮಗಳಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಲಹೆ

State Chief Electoral Officer advised media

13-04-2018

ಬೆಂಗಳೂರು: ಚುನಾವಣೆಯ ಯಶಸ್ಸಿಗೆ ಮಾಧ್ಯಮಗಳ ಪಾತ್ರ ಪ್ರಮುಖವಾಗಿದ್ದು, ನಿಷ್ಪಕ್ಷಪಾತ ವರದಿ ಮಾಡಲು ಮಾಧ್ಯಮಗಳು ಮುಂದಾಗಬೇಕು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಚುನಾವಣಾ ವರದಿಗಾರಿಕೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸಮತೋಲನವಾಗಿ ವರದಿ ಮಾಡಬೇಕು. ಆಯಾ ಪಕ್ಷಗಳಿಗೆ ಅನುಗುಣವಾಗಿ ಮಾಧ್ಯಮಗಳಲ್ಲಿ ಅವಕಾಶ ನೀಡಬೇಕು ಎಂದರು. ಆಧುನಿಕ ಯುಗದಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಷ್ಟೇ ಅಲ್ಲ. ಸಾಮಾಜಿಕ ಮಾಧ್ಯಮಗಳ ಪ್ರಭಾವವೂ ಸಹ ಹೆಚ್ಚಾಗಿದೆ; ಮಾಧ್ಯಮಗಳಿಗೆ ಸಾಮಾಜಿಕ ಜವಾಬ್ದಾರಿಯಿದ್ದು, ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಮಾದರಿ ನಡಾವಳಿ ಸಂಹಿತೆಯನ್ನು ಕಾಪಾಡಬೇಕು ಎಂದರು.

ಚುನಾವಣಾ ಆಯೋಗ ಮಾಧ್ಯಮಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಲಿದೆ. ಮಾಧ್ಯಮಗಳು ಚುನಾವಣಾ ಅಕ್ರಮಗಳನ್ನು ಬೆಳಕಿಗೆ ತರಬೇಕು. ಇದರಿಂದ ಅಕ್ರಮಗಳ ಮೇಲೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.

ಬಿಬಿಎಂಪಿ ವಿಶೇಷ ಆಯುಕ್ತ ಹಾಗೂ ಚುನಾವಣಾ ಸಲಹೆಗಾರ ಮನೋಜ್, ಸುದ್ದಿ ಪ್ರಕಟಿಸುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಮಾಧ್ಯಮಗಳು ಅಭಿಪ್ರಾಯ ರೂಪಿಸುವ ಇಲ್ಲವೆ ಅಭಿಪ್ರಾಯ ಬದಲಿಸುವ ಶಕ್ತಿ, ಸಾಮರ್ಥ್ಯ ಮಾಧ್ಯಮಗಳಿಗಿವೆ. ಈ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ರಾಜ್ಯದ ಹೆಚ್ಚುವರಿ ಚುನಾವಣಾಧಿಕಾರಿ ಜಗದೀಶ್ ಮಾತನಾಡಿ, ಚುನಾವಣಾ ಜಾಹೀರಾತು ನೀಡುವ ಮುನ್ನ ಚುನಾವಣಾ ಆಯೋಗದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಇದಕ್ಕಾಗಿ ರಾಜ್ಯ ಹಾಗೂ ಜಿಲ್ಲಾಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಈ ನಿಯಮಗಳು ಎಫ್.ಎಂ.ವಾಹಿನಿಗಳು, ಕೇಬಲ್ ನೆಟ್ ವರ್ಕ್ ಗಳಿಗೂ ಅನ್ವಯವಾಗಲಿದೆ. ಯಾವುದೇ ಅಭ್ಯರ್ಥಿ ಪರವಾಗಲೀ, ವಿರುದ್ದವಾಗಿ ಜಾಹೀರಾತು ನೀಡಲು ಯಾವುದೇ ಅಭ್ಯರ್ಥಿ ಇಲ್ಲವೆ ವ್ಯಕ್ತಿಗಳಿಗೆ ಅವಕಾಶ ಇಲ್ಲ. ಮತದಾರರನ್ನು ಜಾಗೃತಗೊಳಿಸುವ ಇಲ್ಲವೆ ಚುನಾವಣಾ ಮತದಾನದ ಮಹತ್ವವನ್ನು ಎತ್ತಿಹಿಡಿಯುವ ಜಾಹೀರಾತುಗಳನ್ನು ನೀಡಬಹುದು ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ