ಚುನಾವಣಾ ಅಕ್ರಮ ಕಡಿವಾಣಕ್ಕೆ ಮತ್ತೆಮೂರು ಆ್ಯಪ್

Three more apps to control election illegals

13-04-2018

ಬೆಂಗಳೂರು: ಚುನಾವಣೆಯಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹೆಚ್ಚಿಸಲು ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಿಗೆ ಅನ್ವಯವಾಗುವಂತೆ ಮೂರು ಮೊಬೈಲ್ ಆ್ಯಪ್ಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಹಾಗೂ ಚುನಾವಣಾ ಸಲಹೆಗಾರ ಆರ್.ಮನೋಜ್ ತಿಳಿಸಿದ್ದಾರೆ.

ಚುನಾವಣಾ ಅಕ್ರಮಗಳ ಬಗ್ಗೆ ಚುನಾವಣಾಧಿಕಾರಿಗಳ ಗಮನಕ್ಕೆ ತರುವ ಉದ್ದೇಶದಿಂದ ಎಂಸಿಸಿ ಮೊಬೈಲ್ ಆಪ್ ಸಿದ್ಧಪಡಿಸಿದ್ದು, ಯಾವುದೇ ಅಕ್ರಮಗಳು ನಡೆದರೆ ಸಾರ್ವಜನಿಕರು ಮೊಬೈಲ್‍ನಲ್ಲಿ ಚಿತ್ರಗಳು ಹಾಗೂ ದೃಶ್ಯಗಳನ್ನು ಸೆರೆಹಿಡಿದು, ಅಪ್‍ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.  

ಈ ಮಾಹಿತಿ ನೇರವಾಗಿ ಸಂಬಂಧಟ್ಟ ಚುನಾವಣಾಧಿಕಾರಿ ಗಮನಕ್ಕೆ ಬರಲಿದೆ, ಈ ಆ್ಯಪ್ಗೆ ಗೂಗಲ್ ಮ್ಯಾಪ್‍ನ ಸಂಪರ್ಕ ಕಲ್ಪಿಸಿದ್ದು, ಅಕ್ರಮ ನಡೆದ ಸ್ಥಳವನ್ನು ಪತ್ತೆಹಚ್ಚಿ ನೇರವಾಗಿ ಸ್ಥಳಕ್ಕೆ ತೆರಳಿ ಕ್ರಮ ಕೈಗೊಳ್ಳಲು ಇದರಿಂದ ಸಹಕಾರಿಯಾಗಲಿದೆ. ಬೆಂಗಳೂರಿನಲ್ಲಿ ಈವರೆಗೆ ಸುಮಾರು 200 ದೂರುಗಳು ದಾಖಲಾಗಿವೆ ಎಂದು ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ 500 ತಂಡಗಳು ಚುನಾವಣಾ ಕರ್ತವ್ಯದಲ್ಲಿ ನಿರತವಾಗಿದ್ದು, ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ದೂರವಾಣಿ ಸಂಖ್ಯೆ ಮತ್ತಿತರ ಮಾಹಿತಿಯನ್ನೊಳಗೊಂಡ ಆ್ಯಪ್ಅನ್ನು ನೇರವಾಗಿ ಪ್ಲೇಸ್ಟೋರ್ ಮೂಲಕ ಡೌನ್‍ಲೋಡ್ ಮಾಡಿಕೊಳ್ಳಬಹುದು, ಸಂಬಂಧ ಪಟ್ಟವರಿಗೆ ನೇರವಾಗಿ ದೂರು ನೀಡಲು ಅವಕಾಶವಾಗಲಿದೆ ಎಂದರು.

ಬೆಂಗಳೂರು ನಗರದ ನಾಗರಿಕರಿಗೆ ಚುನಾವಣೆಯ ಬಗ್ಗೆ ಮತ್ತಷ್ಟು ಅರಿವು ಮೂಡಿಸುವ ಸಲುವಾಗಿ ಚುನಾವಣೆಗೆ ಸಂಬಂಧಿಸಿದ ಕ್ವಿಜ್ ಆ್ಯಪ್ ಸಿದ್ಧಪಡಿಸಲಾಗಿದೆ. ಸುಮಾರು 70ರಿಂದ80 ಪ್ರಶ್ನೆಗಳನ್ನು ಅಳವಡಿಸಲಾಗಿದೆ, ಪ್ರತಿ ಬಾರಿ ಹತ್ತು ಪ್ರಶ್ನೆಗಳು ಬರಲಿದ್ದು, ಈ ಪ್ರಶ್ನೆಗಳಿಗೆ ಉತ್ತಮ ರೀತಿಯಲ್ಲಿ ಉತ್ತರ ಹೇಳಿದರೆ, ಫಲಿತಾಂಶ ಸಹ ದೊರೆಯಲಿದ್ದು, ತಮ್ಮ ಜ್ಞಾನವನ್ನು ಪರೀಕ್ಷಿಸಿಕೊಳ್ಳುವ ಜತೆಗೆ ತಮ್ಮ ಅಂಕಪಟ್ಟಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡಲೂ ಸಹ ಸಹಕಾರಿಯಾಗಲಿದೆ ಎಂದು ಮನೋಜ್ ತಿಳಿಸಿದರು.  


ಸಂಬಂಧಿತ ಟ್ಯಾಗ್ಗಳು

BBMP App ಸಾಮಾಜಿಕ ಜಾಲತಾಣ ಅಂಕಪಟ್ಟಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ