‘ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳೊಲ್ಲ’13-04-2018

ಚಿತ್ರದುರ್ಗ: ನೇಕಾರರ ಸಮುದಾಯ ಉಳಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತೆ. ರೈತರು, ನೇಕಾರರಿಗೆ ಸರಿಯಾದ ಅನುಕೂಲಗಳು ಈಗ ರಾಜ್ಯದಲ್ಲಿಲ್ಲ ನಮ್ಮ ಸರ್ಕಾರ ನಿಮ್ಮ ಪರವಾದ ಎಲ್ಲ ಅಭಿವೃದ್ಧಿ ಕೆಲಸ ಮಾಡುತ್ತೇವೆ. ನಿಮ್ಮ ಕಷ್ಟ, ನೋವಿನಲ್ಲಿ ಭಾಗಿ ಆಗುತ್ತೇನೆ, ನೀವು ಹೇಳಿದಂತೆ ಸರ್ಕಾರ ನಡೆಸುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಬರಲ್ಲ ಎಂದು ನುಡಿದ ಅವರು, ನನಗೆ ನಂಬಿಕೆ ಇದೆ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ,‌ ನಾನು ಯಾರ ಮನೆ ಬಾಗಿಲಿಗೂ ಹೋಗಲ್ಲ, ನಾನು ನಿಮ್ಮ ಮನೆ ಬಾಗಿಲಿಗೆ ಮಾತ್ರ ಬರುತ್ತೇನೆ. ಅಂತಹ ಸಂದರ್ಭ ಬಂದರೆ ನಾನು ದೂರವೇ ಉಳಿಯುತ್ತೇನೆ, ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳೊಲ್ಲ. ಇನ್ನು ಒಂದು ತಿಂಗಳು ಕಾಯಿರಿ, ಜೆಡಿಎಸ್ ಅಧಿಕಾರಕ್ಕೆ ಬರುತ್ತೆ ನಿಮ್ಮೆಲ್ಲ ಸಮಸ್ಯೆ ಪರಿಹಾರ ಮಾಡುತ್ತಿನಿ ಎಂದು ಭರವಸೆ ನೀಡಿದ್ದಾರೆ.

ನೇಕಾರರ ಆತ್ಮಹತ್ಯೆ ನಿಲ್ಲಿಸುತ್ತೇನೆ, ರೇಷ್ಮೆ ಬೆಳೆಗೆ ಬೆಂಬಲ ಬೆಲೆ ನೀಡುತ್ತೇನೆ, ಹೊಸ ವ್ಯವಸ್ಥೆಯನ್ನ ರಾಜ್ಯದಲ್ಲಿ ಜಾರಿಗೆ ತರುತ್ತೇನೆ, ನನ್ನನ್ನ ಒಮ್ಮೆ ಪರೀಕ್ಷೆ ಮಾಡಿ, 70ವರ್ಷ ಬೇರೆ ಪಕ್ಷಗಳನ್ನ ಪರೀಕ್ಷೆ ಮಾಡಿದಿರಿ, ನನಗೂ ಒಂದು ಬಾರಿ ಅವಕಾಶ ಕೊಡಿ, ಶಾಸಕರನ್ನ ಮಾತ್ರ ಮಂತ್ರಿ ಮಾಡುವುದಲ್ಲದೇ ವಿವಿಧ ಕ್ಷೇತ್ರಗಳ ತಜ್ಞರನ್ನೂ ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ನೇಕಾರರ ಸಂದರ್ಭ H.D.Kumaraswamy silk


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ