ಅಗಾಧ ಅಕ್ರಮ ಮದ್ಯ ವಶ

illegal liquor seized by police at lingasugur

13-04-2018

ರಾಯಚೂರು: ಲಿಂಗಸುಗೂರು ತಾಲ್ಲೂಕಿನ ಬೊಮ್ಮನಾಳ ಗ್ರಾಮದ ಬಳಿ ಅಕ್ರಮ ಮದ್ಯ ಸಾಗಿಸುತ್ತಿದ್ದ ಎರಡು ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸುಮಾರು 300ಕ್ಕೂ ಹೆಚ್ಚು ಮದ್ಯ ತುಂಬಿದ್ದ ಬಾಕ್ಸ್ಗಳು ಸೇರಿದಂತೆ, ಎರಡು ಟಾಟಾ ಏಸ್ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಚುನಾವಣಾ ಉದ್ದೇಶಕ್ಕಾಗಿ ಅನಧಿಕೃತ ಲಿಕ್ಕರ್ ಸಾಗಿಸುತ್ತಿದ್ದ ವಾಹನಗಳು ಇಳಕಲ್ ಕಡೆಯಿಂದ ಲಿಂಗಸುಗೂರಿಗೆ ಬರುತ್ತಿದ್ದು, ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾರೆ. ಅಕ್ರಮ ಮದ್ಯ ವಶಪಡಿಸಿಕೊಂಡು, ಎರಡೂ ವಾಹನಗಳ ಚಾಲಕರನ್ನು ಬಂಧಿಸಿ ಮುದಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

illegal liquor seized ಲಿಕ್ಕರ್ ತಪಾಸಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ