ಬಿಜೆಪಿ ಟಿಕೆಟ್ ಗಾಗಿ ಆಕಾಂಕ್ಷಿಗಳ ದುಂಬಾಲು!

BJP ticket aspirants pressuring on amit shah!

13-04-2018

ಹುಬ್ಬಳ್ಳಿ: ಬಿಜೆಪಿ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಎರಡನೇ ಪಟ್ಟಿ ಸಿದ್ಧವಾಗುತ್ತಿದ್ದು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಂದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾಗೆ ತಲೆಬಿಸಿ ಶುರುವಾಗಿದೆ. ಉತ್ತರ ಕರ್ನಾಟಕದ ಪ್ರವಾಸದಲ್ಲಿರುವ ಷಾ ತಂಗಿದ್ದ ಹೊಟೆಲ್ ಬಳಿ, ಬೆಳಿಗ್ಗೆಯಿಂದಲೇ ಟಿಕೆಟ್ ಆಕಾಂಕ್ಷಿಗಳು ಹೋಟೆಲ್ ಬಳಿ ಜಮಾಯಿಸಿದ್ದಾರೆ. ಕುಂದಗೋಳ ಕ್ಷೇತ್ರದ ಎಸ್.ಐ.ಚಿಕ್ಕನಗೌಡರ, ಎಂ.ಆರ್ ಪಾಟೀಲ. ಕಲಘಟಗಿ ಕ್ಷೇತ್ರದ ಸಿ.ಎಂ.ನಿಂಬಣ್ಣವರ, ಮಹೇಶ್ ತೆಂಗಿನ ಕಾಯಿ. ಹುಬ್ಬಳ್ಳಿ-ಧಾರಾವಡ ಪೂರ್ವ ಕ್ಷೇತ್ರದ ಚಂದ್ರಶೇಖರ್ ಗೋಕಾಕ್, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಸೇರಿ ಇತರೆ ಆಕಾಂಕ್ಷಿಗಳಿಂದ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಇದೇ ಹೋಟೆಲ್ ನಲ್ಲೇ ತಂಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೂಂದಿಗೂ ಟಿಕೆಟ್ ಆಕಾಂಕ್ಷಿಗಳು ಚರ್ಚೆ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಬಿಎಸ್ ವೈ ನಿನ್ನೆ ಅಮಿತ್ ಷಾ ಅವರ ಜೊತೆ ಸಾಕಷ್ಟು ಚರ್ಚೆ ಮಾಡಲಾಗಿದೆ. ಎರಡನೇ ಪಟ್ಟಿ ಬಿಡುಗಡೆ ಬಗ್ಗೆ ನಾಯಕರ ಜೊತೆ ಚರ್ಚೆ ಮಾಡಲಾಗಿದೆ, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ದೆಹಲಿಯಲ್ಲಿ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ, ಇನ್ನು ತಿಪ್ಪೇಸ್ವಾಮಿ ಬೆಂಬಲಿಗರ ರಂಪಾಟ ವಿಚಾರದ ಕುರಿತು, ಶ್ರೀರಾಮುಲು ಅವರಿಗೆ ಗಲಭೆ ತಡೆಯುವ ತಾಕತ್ತು ಇದೆ, ಅದನ್ನು ಅವರೇ ನೋಡಿಕೊಳ್ಳಲಿ, ಈ ಬಗ್ಗೆ ನಾನು ಹೆಚ್ಚಿಗೆ ಮಾತನಾಡಲಾರೆ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Tickets amit shah ಆಕಾಂಕ್ಷಿ ರಾಜ್ಯಾಧ್ಯಕ್ಷ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ