ಕೋಲಾರ: ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು

Kolar: Code of Conduct violation 2 case filed

13-04-2018

ಕೋಲಾರ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಲಚ್ಚಿ ರೆಡ್ಡಿ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಕೋಲಾರದ ಬೇತಮಂಗಲದ ಬಳಿಯ ಜಂಗಮಾನಹಳ್ಳಿಯ ಅಂಗನವಾಡಿ ಕೇಂದ್ರದಲ್ಲಿ ಸುಮಾರು ನೂರೈವತ್ತು ಜನರಿಗೆ ಮಾಡಿದ್ದ ಅಡುಗೆ ಪಾತ್ರೆಗಳು, ಸ್ಟೌವ್, ಸಿಲಿಂಡರ್, ತಟ್ಟೆಗಳು, ಗ್ಲಾಸ್ ಹಾಗೂ ಇನ್ನಿತರ ಸಾಮಾಗ್ರಿಗಳ ಸಮೇತ ವಶಕ್ಕೆ ಪಡೆದ ಬೇತಮಂಗಲ ಫ್ಲೈಯಿಂಗ್ ಸ್ಕ್ವಾಡ್ (ವಿಚಕ್ಷಣ ದಳ) , ಬೇತಮಂಗಲದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅನಧಿಕೃತವಾಗಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಜೊತೆ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ ಎಂಬುದಾಗಿ ದೂರು ದಾಖಲಾಗಿದೆ. ಇದೇ ವೇಳೆ ಎಂ.ಇ.ಪಿ ಪಕ್ಷ  ಅನುಮತಿ ಪಡೆಯದೇ ಕರಪತ್ರ ಹಂಚಿ ಪ್ರಚಾರ ಕಾರ್ಯ ನಡೆಸಿದೆ ಎಂದು ಪ್ರಕರಣ ದಾಖಲಾಗಿದೆ.

 

 

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ