ಬಸ್ ಪಲ್ಟಿ: ಇಬ್ಬರ ದುರ್ಮರಣ

Private bus accident: two dead

13-04-2018

ಹಾಸನ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿದ್ದು, ಸ್ಥಳದಲ್ಲೇ ಇಬ್ಬರು ಸಾವಿಗೀಡಾಗಿದ್ದಾರೆ. ಜಿಲ್ಲೆಯ ಹಿರೀಸಾವೆ ಬಳಿಯ ಬ್ಯಾಡರಹಳ್ಳಿ ಬಳಿ ಘಟನೆ ನಡೆದಿದೆ. ಕುಂದಾಪುರ ಮೂಲದ ಶಿಶಿಧರ್(13) ಎಂಬ ಬಾಲಕ ಬೆಂಗಳೂರಿನ ಖಾಸಗಿ ಶಾಲೆಯ ದಾಖಲಾತಿಗಾಗಿ ತಂದೆಯೊಂದಿಗೆ ಹೊರಟಿದ್ದು ಮೃಪಪಟ್ಟಿದ್ದಾನೆ. ಮತ್ತು 40ವರ್ಷ ವಯಸ್ಸಿನ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಬಸ್ಸಿನಲ್ಲಿದ್ದ ಹಲವು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹಿರೀಸಾವೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹಿರೀಸಾವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bus accident ಹಿರೀಸಾವೆ ಸಣ್ಣಪುಟ್ಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ