ರಾಯಚೂರಿನಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದ ಎಚ್.ಡಿ.ಕೆ

Kannada News

17-05-2017

ಎಚ್.ವಿಶ್ವನಾಥ್ ಅವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನ ಮಾಡಿದ್ದೇವೆ. ವಿಶ್ವನಾಥ್ ಜೆಡಿಎಸ್ ಸೇರಲು ತೀರ್ಮಾನ ಮಾಡಿದ್ದಾರೆ. ಅವರು ಸನ್ಯಾಸಿ ಅಲ್ಲ ,ಅವರಿಗೆ ರಾಜಕೀಯದಲ್ಲಿ ಸೇವೆ ಸಲ್ಲಿಸುವ ಆಸೆಯಿದೆ. ಅವರನ್ನ ಗೌರವಯುತವಾಗಿ ಬರಮಾಡಿಕೊಳ್ಳುತ್ತೇವೆ. ಕಾಂಗ್ರೆಸ್ ನಲ್ಲಿದ್ದಾಗ ನಮ್ಮ ಪಕ್ಷದ ಬಗ್ಗೆ ಅಪ್ಪ ಮಕ್ಕಳ ಪಕ್ಷ ಅಂತ ಕಟುವಾಗಿ ಮಾತನಾಡಿದ್ದಾರೆ. ಸಿದ್ದರಾಮಯ್ಯನವರೇ ಪಕ್ಷ ಬಿಟ್ಟು ಹೋಗಿ ಸಿಎಂ ಆದಮೇಲೆ ವಿಶ್ವನಾಥ ಯಾವ ಲೆಕ್ಕ. ಪಾತಾಳಗಂಗೆಯನ್ನ ಹುಡುಕುವ ಬದಲು ಕೆರೆಗಳ ಹೂಳು ಎತ್ತಬೇಕು. ಹೂಳು ಎತ್ತಿದ್ದರೆ ಪಾತಾಳಗಂಗೆ ಯೋಜನೆ ಬೇಕಾಗಿರಲಿಲ್ಲ. ನೀರಿನ ನಿರ್ವಹಣೆ ಸರಿಯಾಗಿ ಮಾಡದೇ ಹಣ ಖರ್ಚು ಮಾಡುತ್ತಿದ್ದಾರೆ. ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ಮೂರು ಬೇಲ್ ತೆಗೆದುಕೊಂಡಿದ್ದೇನೆ. ಈಗ ನಾಲ್ಕನೆ ಬೇಲ್ ನೆ ಅರ್ಜಿ ಹಾಕಿದ್ದೇನೆ. ಒಂದೇ ಪ್ರಕರಣವನ್ನು ನಾಲ್ಕು ರೀತಿ ಎಫ್ ಐ ಆರ್ ಹಾಕಿದ್ದಾರೆ. ನಿನ್ನೆ ಪುನಃ ಅರ್ಜಿ ಹಾಕಿದ್ದು ನಮ್ಮ ವಕೀಲರು. ಈ ಸರ್ಕಾರ ಹೇಗೆ ನಡೆದುಕೊಳ್ಳುತ್ತೇ ಅನ್ನೋದು ನನಗೆ  ಗೊತ್ತು. ರಾಜಕೀಯ ಪ್ರೇರಿತವಾಗಿ ಪ್ರಕರಣದ ತನಿಖೆ ನಡೆಯುತ್ತೆ. ದಯಾನಾಯಕ್ ಗೂ ನನಗೂ ಯಾವುದೇ ಸಂಬಂಧವಿಲ್ಲ . ಸುಳ್ಳು ಮಾಹಿತಿಯಿಂದ ಸುಳ್ಳು ವರದಿಗಳು ಪ್ರಕಟವಾಗುತ್ತಿವೆ. ಗಂಗಾರಾಮ್ ಬಡೆರಿಯಾ ಜೊತೆಗೆ ಹೋಗಿದ್ದೇನೆ ಅಂತ ಯಾರು ಮಾಹಿತಿ ನೀಡಿದ್ದು. ನನ್ನ ಅಧಿಕಾರಾವಧಿಯಲ್ಲಿ ಯಾವ ಅಧಿಕಾರಿಗೂ ಒತ್ತಡ ಹೇರಿಲ್ಲ. ಕುಮಾರಸ್ವಾಮಿ ಹೆಸರು ಕೆಡಿಸಬೇಕು ಅಂತ ಪ್ರಯತ್ನಗಳು ನಡೆಯುತ್ತಿವೆ ಎಂಬ ಹೇಳಿಕೆ ನೀಡಿದರು. ಅಷ್ಟೇ ಅಲ್ಲದೇ   ನಗರದ ನಗರೇಶ್ವರ ದೇವಸ್ಥಾನದ ಮೇಲೆ  ಪ್ರಮಾಣ ಮಾಡಿದ ಮಾಜಿ ಸಿ.ಎಂ.ಕುಮಾರಸ್ವಾಮಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ನಗರೇಶ್ವರ ದೇವಸ್ಥಾನದ ಮೇಲೆ  ಪ್ರಮಾಣ ಮಾಡಿ ಹೇಳುತ್ತೇನೆ ಅಧಿಕಾರಕ್ಕೆ ಬಂದ ೨೪ ಘಂಟೆಯಲ್ಲಿ ಸಾಲಮನ್ನಾ ಮಾಡುತ್ತೇನೆ ಎಂದು ರಾಯಚೂರಿನಲ್ಲಿ ಮಾಜಿ ಸಿ.ಎಂ.ಕುಮಾರಸ್ವಾಮಿ ಹೇಳಿಕೆ ನೀಡಿದರು.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ