ಆಟೋ ಚಾಲಕನ ಬರ್ಬರ ಹತ್ಯೆ

auto driver

12-04-2018

ಬೆಂಗಳೂರು: ಕಾಮಾಕ್ಷಿ ಪಾಳ್ಯದ ಸಣ್ಣಕ್ಕಿ ಬಯಲುವಿನಲ್ಲಿ ರಾತ್ರಿ ವೇಳೆ ಆಟೋ ಓಡಿಸುವ ವಿಚಾರದಲ್ಲಿ ಜಗಳ ಉಂಟಾಗಿ ಆಟೋ ಚಾಲಕನೊಬ್ಬನನ್ನು ರಾಡ್‍ನಿಂದ ಹೊಡೆದು ಭೀಕರವಾಗಿ  ಕೊಲೆ ಮಾಡಲಾಗಿದೆ. ಕೊಲೆಯಾದವರನ್ನು ಕೆಂಗೇರಿಯ ಬಿಡಿಎ ಅಪಾರ್ಟ್‍ಮೆಂಟ್‍ನಲ್ಲಿ ವಾಸಿಸುತ್ತಿದ್ದ ಆಟೋ ಚಾಲಕ ಕೋಟೇಶ್ವರ್ (26) ಎಂದು ಗುರುತಿಸಲಾಗಿದೆ. ರಾತ್ರಿ ವೇಳೆ ಆಟೋ ಓಡಿಸುವಾಗ ಹಣಕಾಸಿನ ವಿಚಾರದಲ್ಲಿ ಜಗಳವುಂಟಾಗಿ ಕೊಲೆ ಮಾಡಲಾಗಿದೆ.

ಕೋಟೇಶ್ವರ್ ಕಾಮಾಕ್ಷಿಪಾಳ್ಯದ ಬಳಿ ರಾತ್ರಿ ವೇಳೆ ಆಟೋ ಓಡಿಸುತ್ತಿದ್ದು, ಇದೇ ಪ್ರದೇಶದಲ್ಲಿ ಆಟೋ ಓಡಿಸುವವರ ನಡುವೆ ಜಗಳವುಂಟಾಗಿದೆ. ಇದರಿಂದ ಆಕ್ರೋಶಗೊಂಡ ಆಟೋ ಚಾಲಕರು ಕೋಟೇಶ್ವರ್ ಕೊಲೆಗೆ ಸಂಚು ರೂಪಿಸಿದ್ದಾರೆ.

ರಾತ್ರಿ ಆಟೋ ಓಡಿಸಿಕೊಂಡು ಮನೆಗೆ ಹೋಗಿದ್ದ ಕೋಟೇಶ್ವರ್‍ನನ್ನು ಬೆಳಿಗ್ಗೆ 7.30ರ ವೇಳೆ ಮಾತನಾಡುವ ನೆಪದಲ್ಲಿ ಸಣ್ಣಕ್ಕಿ ಬಯಲಿನ ತೋಟದ ರಸ್ತೆಗೆ ಕರೆಸಿಕೊಂಡು ಹಿಂದಿನಿಂದ ತಲೆಗೆ ಬಲವಾಗಿ ರಾಡ್‍ನಿಂದ ಒಡೆದು ಕೊಲೆ ಮಾಡಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿಚೆನ್ನಣ್ಣವರ್ ತಿಳಿಸಿದ್ದಾರೆ.

ಕೋಟೇಶ್ವರ್ ಅವರ ತಂದೆ ಶಾಂತಿನಗರದ ವಿಜಯಾಬ್ಯಾಂಕ್ ಶಾಖೆಯಲ್ಲಿ ಗುಮಾಸ್ತರಾಗಿದ್ದು, ಮಗನಿಗೆ ಕೆಲ ದಿನಗಳ ಹಿಂದಷ್ಟೆ ಆಟೋ ಕೊಡಿಸಿದ್ದರು. ಕೊಲೆಗೈದ ಆಟೋ ಚಾಲಕರ ಸುಳಿವು ದೊರೆತಿದ್ದು, ಶೀಘ್ರದಲ್ಲಿ ಬಂಧಿಸುವುದಾಗಿ ಅವರು ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ