ಮನೆ ಧೂಳು ಅಪಾಯಕಾರಿ

dust causes allergy

12-04-2018

ಬೆಂಗಳೂರು: ನಗರದಲ್ಲಿ ಉಸಿರಾಟ ಸಂಬಂಧಿ ಅಲರ್ಜಿ ಗಮನಾರ್ಹವಾಗಿ ಹೆಚ್ಚಾಗಿರುವುದಲ್ಲದೇ ಈ ಪ್ರಕರಣಗಳ ಸಂಖ್ಯೆ ಹಾಗೂ ತೀವ್ರತೆ ಈ ನಗರದಲ್ಲಿ ಹೆಚ್ಚಿರುವುದು ಪ್ರಮುಖವಾಗಿದೆ.

ನಗರದ ನ್ಯೂಬರ್ಗ್ ಆನಂದ್ ಡಯಾಗ್ನಾಸ್ಟಿಕ್ ಲ್ಯಾಬ್ಸ್ 2017ರ ಜನವರಿಯಿಂದ ಡಿಸೆಂಬರ್ ವರೆಗೆ ನಡೆಸಿದ 318 ರೋಗಿಗಳ ಅಧ್ಯಯನದಲ್ಲಿ ಶೇ.75ರಷ್ಟು ರೋಗಿಗಳು ಮನೆಯ ಧೂಳಿನ ಕ್ರಿಮಿಗಳಿಗೆ ಅಲರ್ಜಿ ಹೊಂದಿರುವುದು ಕಂಡು ಬಂದಿದೆಯಲ್ಲದೇ ಇದು ಉಸಿರಾಟ ಸಂಬಂಧಿ ಅಲರ್ಜಿಗಳಿಗೆ ಪ್ರಮುಖ ಕಾರಣವೂ ಆಗಿರುತ್ತದೆ.

ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಸಾಮಾನ್ಯವಾಗಿದ್ದರೂ ಮನೆಯ ಒಳಗೂ ಸೂಕ್ಷ್ಮ ಕ್ರಿಮಿಗಳ ಹಾಜರಿಯಿಂದ ಜನರಿಗೆ ಅಲರ್ಜಿ ಉಂಟಾಗುತ್ತದೆ.ಅಲರ್ಜಿ ಪರೀಕ್ಷೆಗೆ ಒಳಗಾದ 318 ಜನರಲ್ಲಿ 111 ಮಂದಿ 1ಯಿಂದ 20 ವರ್ಷ ವಯಸ್ಸಿನವರಾಗಿದ್ದು, ಈ ವಯೋಸಮೂಹ ಅತ್ಯಂತ ಹೆಚ್ಚು ಪೀಡಿತವಾಗಿರುತ್ತದೆ.

ಮನೆ ಧೂಳು ಅಪಾಯಕಾರಿ:

ಈ ಅಧ್ಯಯನ ನಡೆಸಿದ ಬೆಂಗಳೂರಿನ ನ್ಯೂಬರ್ಗ್ ಆನಂದ್ ಡಯಾಗ್ನಾಸ್ಟಿಕ್ ಲ್ಯಾಬ್ಸ್‍ ಇಮ್ಯೂನೋಪೆಥಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಸಾಮ್ರಾಟ್ ಬೋರ್ಡೊಲೋಯ್ ಪ್ರಕಾರ, ಹೊರಾಂಗಣ ಅಲರ್ಜಿಕಾರಕಗಳಾದ ಪರಾಗರೇಣುಗಳಿಗೆ ತೆರೆದುಕೊಳ್ಳದ ಮಕ್ಕಳಲ್ಲಿ ರೋಗನಿರೋಧಕ ವ್ಯವಸ್ಥೆ ಮನೆಯೊಳಗಿನ ಧೂಳಿಗೆ ಅತಿಯಾದ ಪ್ರತಿಕ್ರಿಯೆ ನೀಡುವುದು ಕಂಡು ಬಂದಿದೆ. ಅಂದರೆ ಹೆಚ್ಚಿರುವ ಜೀವನಮಟ್ಟ ಅಲರ್ಜಿಕಾರಕಗಳಿಗೆ ರೋಗನಿರೋಧಕ ಶಕ್ತಿಯನ್ನು ಕೊಂದುಹಾಕಿದೆ ಎಂದರು.

ಬೆಂಗಳೂರಿನ ಸಮರ್ಥ್ ಇಎನ್‍ಟಿ ಅಂಡ್ ಅಲರ್ಜಿ ಸೆಂಟರ್‍ನ ಅಲರ್ಜಿ ವಿಶೇಷಜ್ಞರಾದ ಡಾ. ಗಾಯತ್ರಿ ಪಂಡಿತ್ ಪ್ರಕಾರ, ಅಲರ್ಜಿಕಾರಕಗಳ ಪೈಕಿ ಮನೆಯ ಧೂಳಿನ ಕ್ರಿಮಿಗಳು ಶೇ. 75ರಷ್ಟು ಉಸಿರಾಟದ ಅಲರ್ಜಿಗೆ ಕಾರಣವಾಗುವುದಲ್ಲದೇ  ಶೇ.20ರಷ್ಟು ಅಲರ್ಜಿಯನ್ನು ಪಾರ್ಥೇನಿಯಂ, ಹರಳೆಣ್ಣೆಯ ಗಿಡ ಮುಂತಾದವು ಉಂಟು ಮಾಡುತ್ತವೆ ಎಂದರು.

ಅಲರ್ಜಿಕ್ ರಿಟ್ನಿಸ್ ಜಗತ್ತಿನ 50 ಕೋಟಿ ಜನರನ್ನು ಕಾಡುತ್ತಿದೆ. ಇವರಲ್ಲದೇ ಐದನೇ ಒಂದರಷ್ಟು ಜನರು ಭಾರತೀಯ ಉಪಖಂಡದಲ್ಲಿರುತ್ತಾರೆ. ಕಳೆದ ಎರಡು ದಶಕಗಳಲ್ಲಿ ಬೆಂಗಳೂರು ನಗರದ ವಿಪರೀತ ಬೆಳವಣಿಗೆ ಅಲರ್ಜಿಕಾರಕಗಳಲ್ಲಿ ಬಹಳಷ್ಟು ಬದಲಾವಣೆ ತಂದಿದೆ. ಇದರಿಂದ ಅಲರ್ಜಿ ನಿರ್ವಹಣೆಗೆ ಸಮಗ್ರ ವಿವರ ಪರೀಕ್ಷಿಸುವುದು ಪ್ರಮುಖ ಹೆಜ್ಜೆಯಾಗಿರುತ್ತದೆ.

ಅಧ್ಯಯನದ ಕೆಲ ಅಂಶ: ರೋಗಿಗಳಲ್ಲಿ ಶೇ.75ರಷ್ಟು ಜನರಿಗೆ ಧೂಳಿನ ಕ್ರಿಮಿಗಳು ಪ್ರಮುಖ ಅಲರ್ಜಿಕಾರಕಗಳಾಗಿವೆ. ಜಿರಳೆ ಅಲರ್ಜಿ(ಶೇ.8), ಸೂರ್ಯಕಾಂತಿ ಪರಾಗರೇಣು (ಶೇ.6) ಅಲರ್ಜಿ ಕಾರಕಗಳಾಗಿವೆ. ಉಳಿದಂತೆ ನಾಯಿ ಕೂದಲು, ಕ್ಯಾಟ್ ಡ್ಯಾಂಡರ್, ಕೋಳಿ ಪುಕ್ಕ, ನೀಲಗಿರಿ ಮುಂತಾದ ಸಸ್ಯ ಸಂಬಂಧಿ ಅಲರ್ಜಿ ಕಾರಕಗಳನ್ನು ಗುರುತಿಸಲಾಗಿದೆ


ಸಂಬಂಧಿತ ಟ್ಯಾಗ್ಗಳು

diagnostic dust ಅಲರ್ಜಿ ವಿಪರೀತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ