ಎಸಿಬಿ ಅಧಿಕಾರಿಗಳ ಭರ್ಜರಿ ಬೇಟೆ

ACB Raid in different parts of the state

12-04-2018

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳ ಬಲೆಗೆ ಬಿದ್ದಿರುವ ಹೆಮ್ಮಿಗೆ ಪುರ ಬಿಬಿಎಂಪಿ ಕಚೇರಿ ಕಂದಾಯ ನಿರೀಕ್ಷಕ ಶಿವಕುಮಾರ್ ವಾಜರಹಳ್ಳಿ ಬಳಿ 2 ವಸತಿ ಸಂಕೀರ್ಣ,4 ನಿವೇಶನಗಳು, 880 ಗ್ರಾಂ ಚಿನ್ನ, 4 ಕೆಜಿ 148 ಗ್ರಾಂ ಬೆಳ್ಳಿ, 2 ಕಾರು, 4 ಲಕ್ಷ 23 ಸಾವಿರ ನಗದು, ಎಲ್‍ಐಸಿ ಪಾಲಿಸಿಗಳು, 16 ಲಕ್ಷ 69 ಸಾವಿರ ಗೃಹೋಪಯೋಗಿ ವಸ್ತುಗಳು ಶಿವಕುಮಾರ್ ಬಳಿ ಪತ್ತೆಯಾಗಿವೆ

ಹುಬ್ಬಳ್ಳಿಯ ಕೆಪಿಟಿಸಿಎಲ್‍ನ ಸಹಾಯಕ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ ಸವಣನೂರ ಬಳಿ ಹುಬ್ಬಳ್ಳಿಯಲ್ಲಿ ವಾಸದ ಮನೆ 4 ಖಾಲಿ ಫ್ಲಾಟ್‍ಗಳು, 6 ಎಕರೆ ಕೃಷಿ ಭೂಮಿ, 300 ಗ್ರಾಂ ಚಿನ್ನ, 432 ಗ್ರಾಂ ಬೆಳ್ಳಿ, 6 ಮೊಬೈಲ್‍ಗಳು ಪತ್ತೆಯಾಗಿವೆ.ಎಂದು ಎಸಿಬಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ತಿಳಿಸಿದ್ದಾರೆ.

ಧಾರವಾಡದ ಅರಣ್ಯ ಇಲಾಖೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಾರ್ಶ್ವನಾಥ ವೊರೂರ, ಧಾರವಾಡದಲ್ಲಿ ವಾಸದ ಮನೆ, 5 ಖಾಲಿ ಫ್ಲಾಟ್‍ಗಳು, ಧಾರವಾಡದಲ್ಲಿ 1 ಎಕರೆ 20 ಗುಂಟೆ ಕೃಷಿ ಭೂಮಿ, ಹುಬ್ಬಳ್ಳಿಯಲ್ಲಿ 1 ಎಕರೆ 5 ಗುಂಟೆ ಕೃಷಿ ಭೂಮಿ, 377 ಗ್ರಾಂ ಚಿನ್ನ, 2 ಕೆಜಿ 290 ಗ್ರಾಂ ಬೆಳ್ಳಿ, ಕಾರು, 66 ಸಾವಿರ ನಗದು, ವಿವಿಧ ಬ್ಯಾಂಕ್‍ಗಳ ಖಾತೆಗಳಲ್ಲಿ 13 ಲಕ್ಷ 50 ಸಾವಿರ ನಗದು ಹೊಂದಿದ್ದಾರೆ.

ಕುಂದಾಪುರದ ತಾಲ್ಲೂಕು ಪಂಚಾಯತ್ ಜೂನಿಯರ್ ಇಂಜಿನಿಯರ್ ರವಿಶಂಕರ್ ಕುಂದಾಪುರದಲ್ಲಿ 3 ಮನೆ, 4 ನಿವೇಶನ, 1 ಕೆಜಿ 113 ಗ್ರಾಂ ಚಿನ್ನ, 1 ಕೆಜಿ 74 ಗ್ರಾಂ ಬೆಳ್ಳಿ, ಕಾರು, 18 ಲಕ್ಷ 79 ಸಾವಿರ ನಗದು, 2 ಐ ಫೋನ್, 2 ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ಮೈಸೂರಿನ ಯಾದವಗಿರಿ ವಾಟರ್ ಇನ್ಪ್ಪೆಕ್ಟರ್ ಕೃಷ್ಣೇಗೌಡ ಬಳಿ 2 ವಾಸದ ಮನೆ, 20 ಗುಂಟೆ ಜಮೀನು, 532 ಗ್ರಾಂ ಚಿನ್ನ, 570 ಗ್ರಾಂ ಬೆಳ್ಳಿ, ಕಾರು, 3 ದ್ವಿಚಕ್ರ ವಾಹನಗಳು, 1 ಲಕ್ಷ ನಗದು ಪತ್ತೆಯಾದರೆ, ಜಗಳೂರು ತಾಲ್ಲೂಕು ಮಂಡರಹಳ್ಳಿ ಗ್ರಾಮಪಂಚಾಯಿತಿ ಪಿಡಿಓ ನಾಗರಾಜ್ ಬಳಿ ದಾವಣಗೆರೆಯಲ್ಲಿ 1 ಮನೆ, 33 ಎಕರೆ 21 ಗುಂಟೆ ಕೃಷಿ ಭೂಮಿ, 580 ಗ್ರಾಂ ಚಿನ್ನ, 250 ಗ್ರಾಂ ಬೆಳ್ಳಿ, 2 ಕಾರುಗಳು, 4 ದ್ವಿಚಕ್ರ ವಾಹನಗಳು, 2 ಮೊಬೈಲ್, 3 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

 


ಸಂಬಂಧಿತ ಟ್ಯಾಗ್ಗಳು

ACB Gold ದ್ವಿಚಕ್ರ ವಾಹನ ತಾಲ್ಲೂಕು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ