'ಐ ಮಿಸ್ ಯು ರೀ' ಎಂದು ಬರೆದಿಟ್ಟು ಆತ್ಮಹತ್ಯೆ

A women committed suicide with her 2 children

12-04-2018

ಬೆಂಗಳೂರು: ನೆಲಮಂಗಲ ತಾಲ್ಲೂಕಿನ ತಿಪ್ಪಗೊಂಡನಹಳ್ಳಿಯಲ್ಲಿ ಮನೆಯ ಗೋಡೆ ಮೇಲೆ ಪತಿಗೆ `ಐ ಮಿಸ್ ಯು ರೀ' ಎಂದು ಬರೆದ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ತಿಪ್ಪಗೊಂಡನಹಳ್ಳಿಯ ತಾಯಿ ರಾಧ(25) ಅವರ ಮಕ್ಕಳಾದ ಚಿನ್ಮಯಿ(4) ಮತ್ತು ಸಿಂಚನ(2)ಅವರಿಗೆ ನೇಣು ಬಿಗಿದು ನಂತರ ತಾನೂ  ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತಿ ಶ್ರೀನಿವಾಸ್ ಬೆಳಿಗ್ಗೆ ಕೆಲಸಕ್ಕೆ ಹೋಗಿ ರಾತ್ರಿ ಪಾಪಸ್ ಬಂದು ನೋಡಿದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಆತ್ಮಹತ್ಯೆಗೂ ಮುಂಚೆ ಮನೆಯ ಗೋಡೆ ಮೇಲೆ ಪತಿಗಾಗಿ `ಐ ಮಿಸ್ ಯು ರೀ' ಎಂದು ರಾಧ ಬರೆದಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪತಿ ಶ್ರೀನಿವಾಸ್ ನನ್ನ ವಶಕ್ಕೆ ಪಡೆಕೊಂಡು ಕೌಟುಂಬಿಕ ಕಲಹದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

suicide i miss you ಕೌಟುಂಬಿಕ ನೇಣು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ