ಕುಡತಿನಿ ಶ್ರೀನಿವಾಸ್ ವಿರುದ್ಧ ಹರಿಹಾಯ್ದ ಹೆಚ್ಡಿಕೆ

rebellion fear in bellary JDS?

12-04-2018

ಬಳ್ಳಾರಿ: ಚುನಾವಣಾ ಕಾವು ಹೆಚ್ಚಾಗುತ್ತಿದ್ದಂತೆ ಪಕ್ಷಾಂತರ ಪರ್ವವೂ ಪ್ರಾರಂಭವಾಗಿದೆ, ಯಾರು ಯಾವ ಪಕ್ಷದಲ್ಲಿ ಇರ್ತಾರೆ ಎಂಬುದು ಗೊತ್ತಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಹೇಳಿದ್ದಾರೆ. ಇದೇ ವೇಳೆ ಕುಡತಿನಿ ಶ್ರೀನಿವಾಸ್ ವಿರುದ್ಧ ಹರಿಹಾಯ್ದ ಹೆಚ್ಡಿಕೆ, ಲೂಸ್ ಟಾಕ್ ಮಾತನಾಡೋದು ಬಿಡಿ, ನಾನು ಟಿಕೆಟ್ ಮಾರಾಟ ಮಾಡಿ ಹಣ ಮಾಡುತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಕುಡಿತಿನಿ ಶ್ರೀನಿವಾಸ್ ಜಿಲ್ಲಾಧ್ಯಕ್ಷರಿದ್ದಾಗ ಬಳ್ಳಾರಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಕಟ್ಟಿದ್ದಾರೆ ಎಂಬುದು ಗೊತ್ತು, ನಾನು ಟಿಕೆಟ್ ಕೊಡುತ್ತೀನಿ ಎಂದು ಶ್ರೀನಿವಾಸ್ ಗೆ ಹೇಳಿರಲಿಲ್ಲ, ಪಕ್ಷ ನಿಷ್ಠ ಬೇಕು, ನಮ್ಮ ಮನೆಯಲ್ಲಿ ನನ್ನ ಸಹೋದರನ ಮಗ ಚುನಾವಣೆ ನಿಲ್ಲಬೇಕು ಎಂದು ಹೇಳುತ್ತಾರೆ, ಅವರಿಗೂ ಅಸಮಾಧಾನವಿದೆ, ಪಕ್ಷ ನಿಷ್ಠೆ ಬೇಕಿದೆ ಎಂದರು.

ಕುಡತಿನಿ ಶ್ರೀನಿವಾಸ್ ಓಡಾಟ ನಡೆಸಿದ್ದಾರೆ ನಿಜ, ಆದರೆ ಅದು ಪಕ್ಷ ಕಟ್ಟಲು ಎಂಬುದು ಗೊತ್ತಾಗುತ್ತದೆ. ಬಳ್ಳಾರಿ ಜಿಲ್ಲೆಯಲ್ಲಿ ಮೈನಾರಿಟಿ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು ಎಂಬುದಿದೆ, ಹಾಗಾಗಿ ಇಕ್ಬಾಲ್ ಹೊತ್ತೂರ್ಗೆ ಟಿಕೆಟ್ ನೀಡಿದ್ದೇವೆ, ಒಂದು ಕ್ಷೇತ್ರಕ್ಕೆ ಒಬ್ಬರಿಗೆ ಮಾತ್ರ ಟಿಕೆಟ್ ನೀಡಬೇಕಿದೆ, ಇಬ್ಬರಿಗೆ ಕೊಡೋಕಾಗೊಲ್ಲ ಎಂದು ಶ್ರೀನಿವಾಸ್ ವಿರುದ್ಧ ಹರಿಹಾಯ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ