‘ಉದ್ದೇಶಪೂರ್ವಕವಾಗಿ ವಾಹನ ವಶಕ್ಕೆ ಪಡೆದಿದ್ದಾರೆ’12-04-2018

ಬಾಗಲಕೋಟೆ: ಅನುಮತಿ ಪಡೆಯದೆ ಚುನಾವಣಾ ಪ್ರಚಾರಕ್ಕೆ ವಾಹನ ಬಳಕೆ ಆರೋಪದಡಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸೇರಿದ ವಾಹನವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ನಿನ್ನೆ ರಾತ್ರಿ ಕಾಶಪ್ಪನವರ್ ಮನೆಗೆ ತೆರಳಿದ್ದ ಚುನಾವಣಾಧಿಕಾರಿಗಳು ಹಾಗು ಇಳಕಲ್ ಪೊಲೀಸ್ ತಂಡ ವಶ್ಕೆ ಪಡೆದಿದೆ. ಈ ವೇಳೆ ಅಸಮಧಾನಗೊಂಡ ಕಶಪ್ಪನವರ್ ಉದ್ದೇಶಪೂರ್ವಕವಾಗಿ ನಮ್ಮ ವಾಹನವನ್ನು ವಶಕ್ಕೆ ಪಡೆಯುತ್ತಿದ್ದಾರೆ, ಯಾವುದೇ ಎಫ್.ಐ.ಆರ್ ಇಲ್ಲದೆ ನನ್ನ ಮನೆಗೆ ಭೇಟಿ ನೀಡಿದ್ದಾರೆ, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸೋದಾಗಿ ತಿಳಿಸಿದ್ದಾರೆ. ಅಲ್ಲದೇ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಹೇಳಿಕೆ ಮೇರೆಗೆ ವಾಹನ ಸೀಜ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

election vijayananda kasehppa ಅಭ್ಯರ್ಥಿ ಕಾಶಪ್ಪನವರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ