‘ಟಿಕೆಟ್ ಸಿಗದಿದ್ದಾಗ ಆಕ್ರೋಶ ಸಹಜ’



12-04-2018

ಮಂಗಳೂರು: ಸಚಿವ ರಮಾನಾಥ ರೈಯವರು ಬಿಜೆಪಿಗರು ಕಾಂಗ್ರೆಸ್ ಸೇರುತ್ತಾರೆಂದು ಕಾದು ಕುಳಿತುಕೊಳ್ಳಲಿ, ಬಿಜೆಪಿಯಲ್ಲಿ ಯಾವತ್ತೂ ಭಿನ್ನಾಭಿಪ್ರಾಯ ಸ್ಪೋಟ ಆಗುವುದಿಲ್ಲ, ಆಕಾಂಕ್ಷಿಯಾಗಿದ್ದವನು ಕೊನೇ ತನಕ ಬಿಜೆಪಿಯಲ್ಲಿ ಹೋರಾಡ ಮಾಡುತ್ತಾನೆ, ಸಿಗದಿದ್ದಾಗ ಟಿಕೆಟ್ ಸಿಕ್ಕ ಅಭ್ಯರ್ಥಿಯನ್ನ ಬೆಂಬಲಿಸಿ ಕೆಲಸ ಮಾಡುತ್ತಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಟ್ಟಿ ಘೋಷಣೆ ಆದ ಮೇಲೆ ಅಲ್ಲಿನವರು ಕೆಲವರು ನಮ್ಮಲ್ಲಿ ಬರ್ತಾರೆ, ನಮ್ಮ ಬಾಗಿಲು ತಟ್ಟೋ ಕಾಂಗ್ರೆಸ್ ನವರನ್ನು ಬರಮಾಡಿಕೊಳ್ಳುತ್ತೇವೆ, ರಮಾನಾಥ ರೈಗೆ ಆಶ್ಚರ್ಯ ಆಗುವಷ್ಟು, ಸಿದ್ದರಾಮಯ್ಯರಿ ಅವರಿಗೆ ನಿದ್ದೆ ಬಾರದಷ್ಟು ದೊಡ್ಡ ಸುದ್ದಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗುತ್ತದೆ ಎಂದು ನುಡಿದಿದ್ದಾರೆ.

ನಮ್ಮ ಎಲ್ಲಾ ಕ್ಷೇತ್ರಗಳಿಗೆ ನಾವು ಕೊಟ್ಟ ಹೆಸರುಗಳ ಆಧಾರದಲ್ಲಿ ಮತ್ತೆ ಸಮೀಕ್ಷೆಯಾಗುತ್ತಿದೆ, ಜನಾಭಿಪ್ರಾಯದ ಮುಖಾಂತರ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಕೊಡುವ ಕೆಲಸವಾಗುತ್ತಿದೆ, ನಾನು ಪಕ್ಷದ ಕಾರ್ಯಕರ್ತನಾಗಿದ್ದು, ನಾನು ಪಕ್ಷದ ಬೆಂಬಲಿಗ ಹೀಗಾಗಿ ಯಾರ ಪರವೂ ಬ್ಯಾಟಿಂಗ್ ಮಾಡಲ್ಲ, ಯಾರ ಟಿಕೆಟ್ ಕೂಡ ತಡೆ ಹಿಡಿಯಲ್ಲ, ಈ ಬಗ್ಗೆ ಎದ್ದಿರುವ ಸಂಶಯ ಕೇವಲ ಊಹಾಪೋಹಗಳಷ್ಟೇ ಎಂದು ಹೇಳಿದರು. ಟಿಕೆಟ್ ಸಿಗದೇ ಇದ್ದಾಗ ಆಕ್ರೋಶಗೊಂಡು ಬೈಯ್ಯುವುದು ಸಹಜ, ಆದರೆ ಬೈದರೂ ಮತ್ತೆ ನಾವು ಒಂದಾಗಿ ಕೆಲಸ ಮಾಡುತ್ತೇವೆ ಎಂದರು.


ಸಂಬಂಧಿತ ಟ್ಯಾಗ್ಗಳು

Nalin Kumar Kateel MP ಜನಾಭಿಪ್ರಾಯ ಆಕ್ರೋಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ