ಸಿದ್ದಾರೂಢ ಮಠಕ್ಕೆ ಅಮಿತ್ ಷಾ ಭೇಟಿ

Amit shah visited siddharudha mutt at hubli

12-04-2018

ಹುಬ್ಬಳ್ಳಿ: ಶ್ರೀ ಸಿದ್ದಾರೂಢ ಮಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭೇಟಿ ನೀಡಿದ್ದಾರೆ. ಪೂರ್ಣಕುಂಬ ಹೊತ್ತ ನೂರಾರು ‌ಮಹಿಳೆಯರು ಅಮಿತ್ ಷಾಗೆ‌ ಸ್ವಾಗತ ಕೋರಿದ್ದಾರೆ. ನಂತರದಲ್ಲಿ  ಶ್ರೀ ಸಿದ್ದಾರೂಢ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಷಾ, ಶ್ರೀ ಗುರು ಸಿದ್ದಾರೂಢರ ಆಶೀರ್ವಾದ ಪಡೆದರು. ಈ ವೇಳೆ ಬಿಎಸ್ ವೈ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ಅಮಿತ್ ಷಾ ಜೊತೆಗಿದ್ದರು.

ತದನಂತರ ಶ್ರೀಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷರಿಂದ ಷಾಗೆ ಸನ್ಮಾನ ಮಾಡಲಾಯಿತು. ಅಮಿತ್ ಷಾ ಆಗಮನ ಹಿನ್ನೆಲೆ ಶಸ್ತ್ರ ಸಜ್ಜಿತ ಪಡೆಯಿಂದ ಶ್ರೀಮಠದ ಆವರಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಅಮಿಷಾ ಭೇಟಿ ಮಹತ್ವ ಪಡೆದುಕೊಂಡಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ