'ಬಿಜೆಪಿ-ಕಾಂಗ್ರೆಸ್ ಗೆ ಅಭ್ಯರ್ಥಿಗಳ ಕೊರತೆ’-ಹೆಚ್ಡಿಕೆ12-04-2018

ಬಳ್ಳಾರಿ: ಬಿಜೆಪಿ ಮತ್ತು ಕಾಂಗ್ರೆಸ್ ಗೆ ಅಭ್ಯರ್ಥಿಗಳ ಕೊರತೆ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ 40ಸೀಟುಗಳನ್ನು ಗೆಲ್ಲವ ಗುರಿ ಹೊಂದಿದ್ದೇವೆ, ಬೇರೆ ಪಕ್ಷದವರು ನಮ್ಮ ಸಂಪರ್ಕದಲ್ಲಿದ್ದಾರೆ, ಬಳ್ಳಾರಿಯಲ್ಲಿ ನನ್ನ ವಿರುದ್ಧ ಹೋರಾಟ ಮಾಡಿದವರು ನನ್ನ ಜೊತೆ ಸಂಪರ್ಕದಲ್ಲಿಲ್ಲ ಎಂದು ಪರೋಕ್ಷವಾಗಿ ರೆಡ್ಡಿಗಳು ಸಂಪರ್ಕಕ್ಕೆ ಇಲ್ಲ ಎಂದು ಹೇಳಿದ್ದಾರೆ.

ಜನರ ನಡುವೆ ಇರುವ ದುಡಿಯುವ ಕಾರ್ಯಕರ್ತರು ಸಂಪರ್ಕದಲ್ಲಿದ್ದಾರೆ, ಈ ನಾಡಿನ ಸಂಪತ್ತು ಲೂಟಿಯಾಗಿದೆ, ಜನರ ತೆರಿಗೆ ಹಣ ದುರ್ಬಳಕೆ ಆಗುತ್ತಿದೆ. ಪಾರ್ಲಿಮೆಂಟರಿ ಸಿಸ್ಟಮ್ ಫೇಲ್ಯೂರ್ ಆಗಿಲ್ಲ, ಪ್ರಧಾನಿ ಮೋದಿ ಫೇಲ್ಯೂರ್ ಆಗಿದ್ದಾರೆ ಎಂದು ಕುಟುಕಿದ್ದಾರೆ.


ಸಂಬಂಧಿತ ಟ್ಯಾಗ್ಗಳು

H.D.kumaraswamy bellary reddy ಫೆಲ್ಯೂರ್ ಅಭ್ಯರ್ಥಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ