ಬಿಎಂಟಿಸಿ ನೌಕರನಿಂದ ಬಿಜೆಪಿ ಪರ ಪ್ರಚಾರ

Facebook campaign for BJP from government employee

12-04-2018

ಬೆಳಗಾವಿ: ಸರ್ಕಾರಿ ನೌಕರ ಚುನಾವಣಾ ಪ್ರಚಾರ ಮಾಡುವಂತಿಲ್ಲ ಎಂಬ ನಿಯಮ ಉಲ್ಲಂಘಿಸಿ, ಬಿಎಂಟಿಸಿ ನೌಕರನೊಬ್ಬ ಬಿಜೆಪಿಗೆ ಮತ ನೀಡುವಂತೆ ಫೇಸ್ ಬುಕ್ ನಲ್ಲಿ ಬಿಜೆಪಿ ಪರ ಭರ್ಜರಿ ಪ್ರಚಾರ ನಡೆಸಿರುವುದು ಬೆಳಕಿಗೆ ಬಂದಿದೆ.

ಬೆಳಗಾವಿ ಮೂಲದ ಬಿಎಂಟಿಸಿ ನೌಕರನಾದ ಬಿ.ಎಂ.ದಾನಪ್ಪಗೋಳ ಬಿಜೆಪಿ ಪರ ಪ್ರಚಾರ ನಡೆಸಿದ್ದಾರೆ. ದಾನಪ್ಪಗೋಳ, ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಟ್ಟಲಗಿ ಗ್ರಾಮದ ನಿವಾಸಿ. ಈತ ನಿಯಮ ಉಲ್ಲಂಘಿಸಿ, ಬಿಜೆಪಿಗೆ ಮತ ಹಾಕುವಂತೆ ಇರುವ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಹರಿಬಿಟ್ಟಿದ್ದಾನೆ. ಸರ್ಕಾರಿ ನೌಕರ ಚುನಾವಣಾ ಪ್ರಚಾರ ಮಾಡುವಂತಿಲ್ಲ ಎಂಬುದನ್ನು ಲೆಕ್ಕಿಸದೆ, ಫೇಸ್ ಬುಕ್ ನಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದರೂ, ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ, ಆಯೋಗ ಕಣ್ಮುಚ್ಚಿ ಕುಳಿತಿದೆ ಎಂಬ ದೂರುಗಳು ಕೇಳಿಬರುತ್ತಿವೆ.


ಸಂಬಂಧಿತ ಟ್ಯಾಗ್ಗಳು

KSRTC Facebook ಸರ್ಕಾರಿ ನೌಕರ ಪ್ರಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ