ವಿಜಯಪುರ ನಗರದಲ್ಲಿ ತಡರಾತ್ರಿ ಸದ್ದು ಮಾಡಿದ ಬಂದೂಕು

Kannada News

17-05-2017

ವಿಜಯಪುರ : ನಗರದ ಮಹಾನಗರ ಪಾಲಿಕೆಯ ಸದಸ್ಯ ಶಹನಾಜ ಬೇಗಂ ಮಗನ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆದಿದೆ. ನಗರದ ಹೊರ ವಲಯದ ಬಿದನೂರ ಪೇಟ್ರೊಲ್ ಬಂಕ್ ಬಳಿ ಹಲ್ಲೆಗೆ ಯತ್ನಿಸಲಾಗಿದೆ. ಪಲ್ಸರ್  ಬೈಕ್ ಮೇಲೆ ಇಬ್ಬರು ಅಪರಚಿತರು ಬಂದು ಫೈರೀಂಗ್ ಮಾಡಿ ಪರಾರಿಯಾಗಿದ್ದಾರೆ. ಈ ವೇಳೆ ಮಹಾನಗರ ಪಾಲಿಕೆಯ ಸದಸ್ಯ ಮಗ ಅಜೀಮ ಇನಾಮದಾರ ಪ್ರಾಣಾಪಾಯದಿಂದ ಪಾರಾರಿಯಾಗಿದ್ದು ಈ ಘಟನೆ ಜಲ ನಗರ  ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ