‘ಚುನಾವಣಾ ಆಯೋಗದ್ದು ಆಮೆಯ ನಡಿಗೆ’

I will meet the Election Commission chiefs again-HDD

11-04-2018

ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಡ್ ಟೀಂ ಹಾಸನ ಜಿಲ್ಲೆಯಲ್ಲಿ ಏಳೂ ಸ್ಥಾನ ಗೆಲ್ಲಬೇಕು ಎಂದು ವೀರಾವೇಶದ ಮಾತುಗಳನ್ನಾಡಿದ್ದಾರೆ, ಜಿಲ್ಲೆಯ ಆಡಳಿತ ವ್ಯವಸ್ಥೆ ಇಷ್ಟು ಹದಗೆಡಲು ಸಿಎಂ ಕುಮ್ಮಕ್ಕು ಕಾರಣ ಎಂದು‌ ಜಾತ್ಯತೀತ ಜನತಾದಳದ ಅಧ್ಯಕ್ಷ ಎಚ್.ಡಿ.ದೇವೇಗೌಡ ಕಿಡಿಕಾರಿದ್ದಾರೆ.

ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದೇವೇಗೌಡರು,  ಮಂಜೇಗೌಡ ಸಿಎಂ‌ ಒಡನಾಡಿಯಾಗಿ ಕೆಲಸ ಮಾಡುತ್ತಿದ್ದಾರೆ, ಸಿಎಂ ‌ಆ ಸ್ಥಾನದ ಗೌರವ ಕಳೆದುಕೊಂಡು‌ ವರ್ತಿಸುತ್ತಿದ್ದಾರೆ ಎಂದು ದೂರಿದರು. ಸಿಎಂ‌ಗೆ ಚುನಾವಣಾ ನೀತಿ ಸಂಹಿತೆ ಲೆಕ್ಕಕ್ಕೆ ಇಲ್ಲದಂತಾಗಿದೆ, ಹಾಸನ ಜಿಲ್ಲೆಯಲ್ಲಿ ಮುಕ್ತ ನ್ಯಾಯಸಮ್ಮತ ಚುನಾವಣೆ ನಡೆಯೋ ಬಗ್ಗೆ ಅನುಮಾನವಿದೆ.

ನಾನು‌ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಓಂ ಪ್ರಕಾಶ್ ರಾವತ್ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನ ಪ್ರಭಾ ಸರಕಾರದ ವಿರುದ್ಧ ಮಾತನಾಡಲ್ಲ. ಏಕೆಂದ್ರೆ ಸಿಎಂ ಅವರಿಗೆ ಲೈಫ್ ಕೊಟ್ಟಿದ್ದಾರೆ, ರಾಜ್ಯದ ಆಡಳಿತ ಯಂತ್ರ ಕೋಡ್ ಆಫ್ ಕಂಡಕ್ಟ್ ಗೆ ಮಾನ್ಯತೆ ಕೊಡದೆ, ಕಡತ ವಿಲೇವಾರಿ ಮಾಡುತ್ತಿದ್ದಾರೆ. ನಾನು‌ ಮತ್ತೆ ಚುನಾವಣಾ ಆಯೋಗದ ಮುಖ್ಯಸ್ಥರನ್ನು ಭೇಟಿ ಮಾಡುವೆ ಎಂದು ದೇವೇಗೌಡ ತಿಳಿಸಿದರು.

ನಾವು ತಪ್ಪು ಮಾಡಿದ್ದರೆ ನಮ್ಮೇಲೂ ಕ್ರಮ ಕೈಗೊಳ್ಳಲಿ. ನಾನು ಹಾಸನ‌ ಡಿಸಿಯನ್ನು ದುರ್ಬಳಕೆ ಮಾಡಿಕೊಂಡಿಲ್ಲ, ಡಿಸಿ ನನ್ನ ಸಂಬಂಧಿಕರಲ್ಲ, ಹಾಸನ ಜಿಲ್ಲೆಗೆ ವಿಶೇಷ ತಂಡ ಕಳಿಸುವಂತೆ ಒತ್ತಾಯ ಮಾಡುತ್ತೀನಿ ಎಂದು ದೇವೇಗೌಡ ಹೇಳಿದರು.

ಚುನಾವಣಾ ಆಯೋಗದ ಬಗ್ಗೆಯೂ ಹೆಚ್ಡಿಡಿ ಅಸಮಾಧಾನ ವ್ಯಕ್ತಪಡಿಸಿದರು. ಚುನಾವಣಾ ಆಯೋಗದ್ದು ಆಮೆಯ ನಡೆ ಎಂದು ಬೇಸರ ವ್ಯಕ್ತಪಡಿಸಿದರು. ಆಡಳಿತ ಪಕ್ಷದವರು  ಆಯೋಗವನ್ನು ಧಿಕ್ಕರಿಸಿ ಶರವೇಗದಲ್ಲಿ ಅಕ್ರಮ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ದೇಶದಲ್ಲೇ ಕರ್ನಾಟಕದಲ್ಲಿ ಮಾತ್ರ ಚುನಾವಣೆ ನಡೆಯುತ್ತಿದೆ, ಕಡ್ಡಾಯವಾಗಿ ಕಾರ್ಯ ಪ್ರವೃತ್ತರಾಗಲು ಆಯೋಗಕ್ಕೆ ಮನವಿ ಮಾಡುತ್ತೀನಿ, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ರಾಜ್ಯ ಸರಕಾರ ಪರವಾಗಿದ್ದಾರೆ. ಅವರ ಜೊತೆ ಮತ್ತೊಬ್ಬ ದಕ್ಷ ಅಧಿಕಾರಿ ನಿಯೋಜನೆ ಮಾಡಲಿ ಎಂದು ಮಾಜಿ ಪ್ರಧಾನಿ ಅಭಿಪ್ರಾಯಪಟ್ಟರು.


ಸಂಬಂಧಿತ ಟ್ಯಾಗ್ಗಳು

O. P. Rawat H.D.devegowda ದಕ್ಷ ಅಧಿಕಾರಿ ಅಭಿಪ್ರಾಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ