'ಸರ್ಕಾರದ ಗುಲಾಮರಾಗ ಬೇಡಿ' -ಹೆಚ್ಡಿಕೆ

HDK Garam against the election authorities

11-04-2018

ಬೆಂಗಳೂರು: ಚುನಾವಣಾ ಅಧಿಕಾರಿಗಳ ವಿರುದ್ದ ಗರಂ ಆಗಿರುವ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ, ನೀವು ಸರ್ಕಾರದ ಗುಲಾಮರಾಗಿ ಕೆಲಸ ಮಾಡಬೇಡಿ. ಬದಲಾಗಿ 6.5ಕೋಟಿ ಜನರ ಪರ ಕೆಲಸ ಮಾಡಿ ಎಂದು ಖಾರವಾಗಿ ಸಲಹೆ ನೀಡಿದ್ದಾರೆ.

ಕೊಪ್ಪಳದಲ್ಲಿ ನಡೆದ ವಿಕಾಸ ಪರ್ವಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಚುನಾವಣಾ ನೀತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ರಿಟರ್ನಿಂಗ್ ಆಫಿಸರ್ ಗಳು ನಮಗೆ ತೊಂದರೆ ಕೊಡುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ತಾವರಗೇರಾ ಸಮೀಪದಲ್ಲಿ ನಮ್ಮ ವಾಹನ ಸೀಜ್ ಮಾಡಿದ್ದಾರೆ. ಚಾಲಕರಿಗೆ ಕೊಟ್ಟ ಸಂಬಳ ಹಣವಿದ್ದ ಕಾರಣಕ್ಕೆ ವಾಹನ್ ಸೀಜ್ ಮಾಡಿದ್ದಾರೆ. ಜತೆಗೆ ಕೂಡ್ಲಗಿ ಬಳಿ ಸಮಾವೇಶ ನಡೆಸಲು ಅನುಮತಿ ನೀಡುತ್ತಿಲ್ಲ. ಇದ್ಯಾವ ಸೀಮೆ ಚುನಾವಣಾ ಆಯೋಗ ಎಂದು ಕಿಡಿಕಾರಿದರು.

ಇದೇ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ, ಸಿಎಂ ಬರೀ ದೌರ್ಭಾಗ್ಯಗಳನ್ನೇ ನೀಡಿದ್ದಾರೆ. ಅದನ್ನ ನಾನು ಸರಿಪಡಿಸುತ್ತೇನೆ, ಸಾಲಮನ್ನಾ ಹೆಸರಿನಲ್ಲಿ ರೈತರಿಗೆ ಸಿದ್ದರಾಮಯ್ಯ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.


ಸಂಬಂಧಿತ ಟ್ಯಾಗ್ಗಳು

HD kumara swamy election ಗರಂ ಅಧಿಕಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ