ಎಂಇಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ

MEP Election Manifesto Released

11-04-2018

ಬೆಂಗಳೂರು: ಮಹಿಳಾ ಎಂಪವರ್ಮೆಂಟ್ ಪಕ್ಷದ ಪ್ರಣಾಳಿಕೆಯಲ್ಲಿ ಕೃಷಿ, ಶಿಕ್ಷಣ ಮತ್ತು ಆರೋಗ್ಯ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಎಂಇಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜಸ್ಥಾನ ಬಿಟ್ಟರೇ ದೇಶದಲ್ಲಿ ಅತಿ ಹೆಚ್ಚು ಒಣಭೂಮಿ ರಾಜ್ಯದಲ್ಲಿ‌ ಇರುವುದರಿಂದ ಬರಡು ನೆಲಕ್ಕೆ ನೀರು ಹರಿಸಿ ಕೃಷಿ ಮೂಲಕವೇ ಕರ್ನಾಟಕವನ್ನು ಸಮೃದ್ಧ ರಾಜ್ಯವನ್ನಾಗಿ ಮಾಡಲು ಪಣತೊಟ್ಟಿದೆ.

ಇನ್ನು ಎರಡು ದಿನಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಶೇ.35ರಷ್ಟು ಸ್ಥಾನ ಮಹಿಳೆಯರಿಗೆ ಮೀಸಲಿಡಲಾಗುವುದು. ವಿಧಾನಸಭೆ ಚುನಾವಣೆ ಫಲಿತಾಂಶ ನಂತರ ಬಿಜೆಪಿ, ಕಾಂಗ್ರೆಸ್ ಜೊತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ ರಾಜ್ಯದ ಜನತೆ ಎಂಇಪಿಗೆ ಅಧಿಕಾರ ಕೊಡಲಿದ್ದಾರೆ ಎಂಬ ವಿಶ್ವಾಸವಿದೆ.

ಎಂಇಪಿ ಬಿಜೆಪಿಯ ‘ಬಿ ಟೀಂ’ ಆಗಿ ಕೆಲಸ ಮಾಡುತ್ತಿದೆ ಎಂಬ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ನಾವು ಯಾರ ಜೊತೆ ಕೈಜೋಡಿಸುವುದಿಲ್ಲ. ನಾನು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ವಿಧಾನಸಭೆ ಚುನಾವಣೆ ನಂತರ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯದಲ್ಲೂ ವಿಧಾನಸಭೆ ಚುನಾವಣೆಯಲ್ಲಿ ಎಂಇಪಿ ಸ್ಪರ್ಧೆ ಮಾಡಲಿದೆ. ರಾಜ್ಯ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ರೈತರ ಧ್ವನಿ ಸದಾಕಾಲ ಕೇಳಬೇಕು ಇದಕ್ಕಾಗಿ ಶೇ.4ಸ್ಥಾನಗಳನ್ನು ಮೀಸಲು ಇಡಲಾಗಿದೆ ಎಂದು ಘೋಷಿಸಿದರು.

ಒಟ್ಟಾರೇ ಡಾ.ನೌಹೀರಾ ಶೇಕ್ ಹೇಳಿದ್ದು:

1.ರೈತರ ಸಾಲಮನ್ನಾ

2.ಹೆಣ್ಣುಮಕ್ಕಳಿಗೆ ಎಲ್.ಕೆ.ಜಿ ಯಿಂದ ಪಿಜಿವರೆಗೆ ಉಚಿತ ಶಿಕ್ಷಣ.

3.ಸರ್ಕಾರಿ ಶಾಲೆಗಳಿಗೆ ವಿಶ್ವದರ್ಜೆ ಸೌಲಭ್ಯ.

4.ಎಲ್ಲ ಜಿಲ್ಲೆಗಳಲ್ಲಿ ಮಣ್ಣು ಪರೀಕ್ಷೆ ಕೇಂದ್ರಗಳ ಸ್ಥಾಪನೆ.

5.ಪ್ರತಿವರ್ಷ 10ಲಕ್ಷ ಉದ್ಯೋಗ ಸೃಷ್ಟಿ.

6.ಎಲ್ಲರಿಗೂ ಸಾಮಾನ ಗುಣಮಟ್ಟದ ವಿದ್ಯುತ್ ಪೂರೈಕೆ.

7.ರಾಜ್ಯದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ.

8. ಪಾನನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ತರುವುದು.

9.ಕಾವೇರಿ, ಮಹದಾಯಿ, ಕೃಷ್ಣ ನೀರಿನ ಹಕ್ಕು ರಕ್ಷಣೆಗೆ ದಿಟ್ಟಕ್ರಮ.

10. ಇಂಧನ ಸ್ವಾವಲಂಬನೆಗೆ ಆದ್ಯತೆ.

11.ಅಪರಾಧಿಗಳ ಪತ್ತೆಗೆ ಇ-ಟೆಕ್ನಾಲಜಿ ಬಳಕೆ.

 

 


ಸಂಬಂಧಿತ ಟ್ಯಾಗ್ಗಳು

women empower party manifesto ಮಹದಾಯಿ ದಿಟ್ಟಕ್ರಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ