ನಾಪತ್ತೆಯಾಗಿದ್ದ ಪಿಹೆಚ್‍ಡಿ ವಿದ್ಯಾರ್ಥಿನಿ ಪತ್ತೆ

A missing PhD student found at private hotel

11-04-2018

ಬೆಂಗಳೂರು: ಲಂಡನ್‍ನಿಂದ ಬಂದು ಬೆಳ್ಳಂದೂರಿನಿಂದ ನಾಪತ್ತೆಯಾಗಿದ್ದ ಕೆನಡಾದ ಟೊರಾಂಟೋದ ಪಿ.ಹೆಚ್‍.ಡಿ ವಿದ್ಯಾರ್ಥಿನಿ ಆತ್ರೇಯಿ ನಗರದ ಖಾಸಗಿ ಹೋಟೆಲ್‍ವೊಂದರಲ್ಲಿ ಪತ್ತೆಯಾಗಿದ್ದಾರೆ.

ಕಳೆದ ಶುಕ್ರವಾರ (ಏಪ್ರಿಲ್ 6)ದಿಂದ ಕಾಣೆಯಾಗಿರುವ ಮನಶಾಸ್ತ್ರಜ್ಞೆ ಆತ್ರೇಯಿ ಅವರ ಪತ್ತೆಗಾಗಿ ಕುಟುಂಬದವರು, ಸ್ನೇಹಿತರು ಹಾಗೂ ಸಹೋದ್ಯೋಗಿಗಳು ಶೋಧ ನಡೆಸಿ ಆತ್ರೇಯಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಇವುಗಳ ಸಹಾಯದಿಂದ ಆತ್ರೇಯಿಯನ್ನು ಗುರುತಿಸಿದ ಹೋಟೆಲ್ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಪೊಲೀಸರು ಹೋಟೆಲ್‍ಗೆ ತೆರಳಿ ವಿಚಾರಣೆ ನಡೆಸಿದ್ದಾರೆ.

ಆತ್ರೇಯಿ ಹೋಟೆಲ್‍ನಲ್ಲಿ ಕಳೆದ ಮೂರು ದಿನಗಳಿಂದ ಉಳಿದುಕೊಂಡಿದ್ದರು ಎಂದು ತಿಳಿದು ಬಂದಿದೆ. ಸದ್ಯ ಆತ್ರೇಯಿಯನ್ನು ಅವರ ಪೋಷಕರ ಜೊತೆ ಕಳಿಸಿಕೊಡಲಾಗಿದೆ. ಖಿನ್ನತೆಯಿಂದ ಬಳಲುತ್ತಿದ್ದ ಆತ್ರೇಯಿ ಒಬ್ಬಂಟಿಯಾಗಿರಲು ಹೋಟೆಲ್‍ನಲ್ಲಿ ತಂಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

PHD london ಮನಶಾಸ್ತ್ರಜ್ಞೆ ಸಾಮಾಜಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ