ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಹೆಚ್ಚಿದ ಆತಂಕ!

on 13th april congress first list: discussion is going

11-04-2018

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಾವು ಸೂಚಿಸಿದ ನೂರೈವತ್ತು ಮಂದಿಗೆ ಟಿಕೆಟ್ ನೀಡುವಂತೆ ಸಿಎಂ ಸಿದ್ದರಾಮಯ್ಯ ಕೋರಿದ್ದು ಕಾಂಗ್ರೆಸ್ ಹೈಕಮಾಂಡ್ ಇದಕ್ಕೆ ಒಪ್ಪಿಗೆ ನೀಡಿದೆ. ಮುಂದಿನ ಚುನಾವಣೆಯಲ್ಲಿ ಸ್ವಯಂಬಲದ ಮೇಲೆ ಗೆಲ್ಲುವುದು ಅನಿವಾರ್ಯವಾಗಿರುವುದರಿಂದ ಮತ್ತು ಯಾರು ಗೆಲ್ಲುತ್ತಾರೆ? ಗೆಲ್ಲಬಲ್ಲರು? ಎಂಬ ಕುರಿತು ತಾವು ಸರ್ವೇಗಳನ್ನು ಮಾಡಿಸಿದ್ದು ಈ ಹಿನ್ನೆಲೆಯಲ್ಲಿ ನೂರೈವತ್ತು ಕ್ಷೇತ್ರಗಳಲ್ಲಿ ನಾನು ಹೇಳಿದವರಿಗೆ ಟಿಕಟ್ ಕೊಡಿ ಎಂದು ಸಿದ್ದರಾಮಯ್ಯ ವರಿಷ್ಠರನ್ನು ಕೋರಿದ್ದರು.

ಸುಮಾರು ನೂರು ಮಂದಿ ಗೆಲ್ಲುವ ಪರಿಸ್ಥಿತಿಯಲ್ಲಿದ್ದಾರೆ. ಉಳಿದಂತೆ ಶ್ರಮ ವಹಿಸಿದರೆ ಇನ್ನೂ ಮೂವತ್ತು ಮಂದಿಗೆ ಗೆಲ್ಲುವ ಅವಕಾಶವಿದೆ. ಇದರೊಂದಿಗೆ 74 ಮಂದಿಯ ಪೈಕಿ ಎಷ್ಟು ಮಂದಿ ಗೆಲ್ಲುತ್ತಾರೆ ಎಂದು ನೋಡಿಕೊಂಡಿದ್ದೇನೆ ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ. ಶತಾಯಗತಾಯ ನಾವು ಸ್ವಯಂಬಲದ ಮೇಲೆ ಗೆಲ್ಲುವುದು ನಿಶ್ಚಿತ. ಇದರಲ್ಲಿ ಯಾವ ಅನುಮಾನವೂ ಬೇಡ. ನಾನು ಸೂಚಿಸುವ ನೂರೈವತ್ತು ಕ್ಯಾಂಡಿಡೇಟುಗಳು ಕೂಡಾ ನನ್ನ ಬೆಂಬಲಿಗರು ಅಂತಲ್ಲ. ಗೆಲ್ಲುವ ಕ್ಯಾಂಡಿಡೇಟುಗಳು ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.

ಬಿಜೆಪಿಯ ಜೊತೆ ಜೆಡಿಎಸ್ ಸಂಬಂಧ ಸಾಧಿಸಿದ್ದು ಇದು ಮತದಾರರಿಗೂ ಗೊತ್ತಿರುವುದರಿಂದ ಬಿಜೆಪಿಯೇತರ ಮತಗಳು ಕನ್‍ಸಾಲಿಡೇಟ್ ಆಗುತ್ತವೆ. ಆ ಸಂದರ್ಭದಲ್ಲಿ ನಾವು ಯಾರನ್ನು ಕಣಕ್ಕಿಳಿಸಬೇಕು ಎಂಬುದು ಮುಖ್ಯ.

ನಾವು ಕಣಕ್ಕಿಳಿಸುವ ಅಭ್ಯರ್ಥಿಗಳ ಬಗ್ಗೆ ಮತದಾರರಿಗೆ ಭರವಸೆ ಮೂಡಿದರೆ ಅನುಮಾನವೇ ಇಲ್ಲದೆ ಸ್ವಯಂಬಲದ ಮೇಲೆ ಗೆದ್ದು ಸರ್ಕಾರ ರಚಿಸುತ್ತೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದು, ಹೈಕಮಾಂಡ್ ವರಿಷ್ಠರು ಇದರ ಆಧಾರದ ಮೇಲೆ ಕ್ಯಾಂಡಿಡೇಟುಗಳ ಪಟ್ಟಿ ಸಜ್ಜುಗೊಳಿಸುತ್ತಿದ್ದಾರೆ.

ಏಪ್ರಿಲ್ ಹದಿಮೂರರಂದು ಮೊದಲ ಕಂತಿನ ಪಟ್ಟಿ ಪ್ರಕಟವಾಗಲಿದ್ದು ಬಹುತೇಕ ಮಂದಿ ಸಿದ್ದರಾಮಯ್ಯ ಬೆಂಬಲಿಗರಿಗೆ ಈ ಪಟ್ಟಿಯಲ್ಲಿ ಟಿಕೆಟ್ ಸಿಗಲಿದೆ. ಈ ಮಧ್ಯೆ ಮುಂದಿನ ಚುನಾವಣೆಯ ಸಕಲ ಉಸ್ತುವಾರಿಯನ್ನು ಸಿಎಂ ಸಿದ್ಧರಾಮಯ್ಯ ಅವರ ಹೆಗಲ ಮೇಲೆ ಹೊರಿಸಿರುವ ಹೈಕಮಾಂಡ್, ಅವರು ಹೇಳಿದ ರೀತಿಯಲ್ಲಿ ಪಕ್ಷ ಮುನ್ನಡೆಯಬೇಕು ಎಂದು ಇತರ ನಾಯಕರಿಗೂ ಸೂಚಿಸಿದೆ. ಮೊದಲು ನಾವು ಗೆಲ್ಲುವುದು ಮುಖ್ಯ. ಗೆದ್ದ ನಂತರ ಮುಂದೆ ಹಲವು ದಾರಿಗಳು ತೆರೆದುಕೊಳ್ಳುತ್ತವೆ. ಹೀಗಾಗಿ ಸಂಕಷ್ಟ ಕಾಲದಲ್ಲಿ ಯಾರೂ ಭಿನ್ನಮತ, ವೈಮನಸ್ಯ ಎಂದು ಕೂರಬೇಡಿ. ಯಾರಾದರೂ ಸ್ಥಳೀಯವಾಗಿ ಅಂತಹ ಕೆಲಸಕ್ಕಿಳಿದರೆ ಮೊದಲು ಅಂತವರನ್ನು ಪಕ್ಷದಿಂದ ಉಚ್ಚಾಟಿಸಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

 


ಸಂಬಂಧಿತ ಟ್ಯಾಗ್ಗಳು

siddaramaiah candidates ಅಧ್ಯಕ್ಷ ಹೈಕಮಾಂಡ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Shemale anal sex http://shemales.blogporn.in/?page.aspen hard core shemalle shemalemovie.com ladyboy free videos pron.com
  • avafl2
My modish website: http://ben.post1.telrock.org
  • beatricehy4