ನಗರದಲ್ಲಿ ಮತ್ತೊಂದು ಭಾರೀ ಬೆಂಕಿ ಅವಘಡ

Another heavy fire incident in hardware shop at kalasipalya

11-04-2018

ಬೆಂಗಳೂರು: ಕಳಾಸಿಪಾಳ್ಯದ ಎನ್‍ಆರ್ ರಸ್ತೆಯ ಹಾರ್ಡ್‍ವೇರ್ ಅಂಗಡಿಯೊಂದರಲ್ಲಿ ಇಂದು ಮುಂಜಾನೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ. ಎನ್‍ಆರ್ ರಸ್ತೆಯ ಎಕ್ಸಲೆಂಟ್ ಎಂಟರ್ ಪ್ರೈಸಸ್ ಹಾರ್ಡ್‍ವೇರ್ ಅಂಗಡಿಗೆ ಮುಂಜಾನೆ 3ರ ವೇಳೆ ವಿದ್ಯುತ್ ಶಾರ್ಟ್‍ ಸರ್ಕ್ಯೂಟ್ ನಿಂದ ತಗುಲಿದ ಬೆಂಕಿ ಸ್ವಲ್ಪ ಹೊತ್ತಿನಲ್ಲೇ ಇಡೀ ಅಂಗಡಿ ಆವರಿಸಿದೆ.

ಅಂಗಡಿಯಲ್ಲಿ ರಾಸಾಯನಿಕ ವಸ್ತುಗಳೇ ತುಂಬಿದ್ದರಿಂದ ಬೆಂಕಿಯ ಜ್ವಾಲೆ ಹೆಚ್ಚಾಗಿ ಹೊರ ಬರಲಾರಂಭಿಸಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ 10ಕ್ಕೂ ಹೆಚ್ಚು ವಾಹನಗಳು ಬೆಳಿಗ್ಗೆ 10ರವರೆಗೆ ಶ್ರಮಿಸಿ ಬೆಂಕಿ ನಂದಿಸಿವೆ. ಪ್ರಕರಣ ದಾಖಲಿಸಿರುವ ಕಳಾಸಿಪಾಳ್ಯ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Hardware fire ಜ್ವಾಲೆ ನಷ್ಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ