ಚಲಿಸುತ್ತಿದ್ದ ಪೈಯಟ್ ಕಾರ್ ನಲ್ಲಿ ಆಕಸ್ಮಿಕ ಬೆಂಕಿ

Kannada News

17-05-2017

ವಿಜಯಪುರ: ಚಲಿಸುತ್ತಿದ್ದ ಪೈಯಟ್ ಕಾರ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಸುಟ್ಟು ಭಸ್ಮವಾಗಿದೆ. ಈ ಅಪಘಾತದಿಂದ ಮಾಜಿ ಶಾಸಕರ ಮೊಮ್ಮಗ ಬಚಾವ್ ಆಗಿದ್ದಾರೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ತಾಳಿಕೋಟಿ ಬಳಿ ಈ ಘಟನೆ ನಡೆದಿದ್ದು ಅಪ್ಪು ದೇಸಾಯಿ ಹಾಗೂ ಅವರ ಕಾರು ಚಾಲಕ ಪಾರಾಗಿದ್ದಾರೆ. ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬಿಟ್ಟಿಳಿಯಿತ್ತಿದ್ದಂತೆ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಾಳಿಕೋಟಿಯಿಂದ ತುಂಬಗಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು ಸಾಸನೂರ ನಿವಾಸಿ ಅಪ್ಪು ದೇಸಾಯಿ ಅವರು ತೋಟಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ