ನೀತಿ ಸಂಹಿತೆ ಪಾಲಿಸಿ ಬಿಜೆಪಿ ಗೆಲ್ಲಿಸಿ -ಬಿಎಸ್ವೈ 11-04-2018

ಬೆಂಗಳೂರು: ನೀತಿ ಸಂಹಿತೆಗಳನ್ನು ಮೀರದಂತೆ ಕಾರ್ಯನಿರ್ವಹಿಸಿ ಬಿಜೆಪಿಯನ್ನು ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಗೆಲ್ಲಿಸುವಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ.

ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಚುನಾವಣಾ ನಿರ್ವಹಣಾ ಸಮಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಯಡಿಯೂರಪ್ಪ ಮಾತನಾಡಿದರು. ಚುನಾವಣಾ ನೀತಿ ಸಂಹಿತೆ ನಿಯಮಗಳನ್ನು ಮೀರದಂತೆ ಕಾರ್ಯನಿರ್ವಹಿಸಬೇಕು. ಬಿಜೆಪಿಯನ್ನು ಗೆಲ್ಲಿಸುವುದೇ ಗುರಿ ಯಾಗಬೇಕು ಎಂದು ಅವರು ಸಲಹೆ ನೀಡಿದರು.

ಪಕ್ಷದ ರಾಷ್ಟ್ರ ನಾಯಕರ ಆಶಯದಂತೆ 150 ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಸಲುವಾಗಿ ಸಂಘಟಿತರಾಗಿ ಕೆಲಸ ಮಾಡುವಂತೆ ಯಡಿಯೂರಪ್ಪ ಕೋರಿದರು. ರಾಜ್ಯದ ಎಲ್ಲಾ ಭಾಗದ ಚುನಾವಣಾ ಉಸ್ತುವಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಮುಖಂಡರುಗಳಾದ ಅನಂತ್ ಕುಮಾರ್, ಮುರಳೀಧರ್ ರಾವ್, ಶೋಭಾ ಕರಂದ್ಲಾಜೆ, ಬಿ.ಎಲ್.ಸಂತೋಷ್,  ಪಿ.ಸಿ.ಮೋಹನ್ ಮುಂತಾದವರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಬಿಜೆಪಿ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ವೆಚ್ಚ, ಪ್ರಚಾರ, ಪ್ರಚಾರ ಸಾಮಗ್ರಿಗಳ ಪ್ರಕಟಣೆ ಹಾಗೂ ಪ್ರಚಾರ ಸಾಮಗ್ರಿಗಳ ತಯಾರಿಗಾಗಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ವಿವಿಧ ಸಮಿತಿಗಳನ್ನು ರಚಿಸಿದ್ದು, ಆ ಸಮಿತಿಗಳ ಪ್ರಮುಖರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.


ಸಂಬಂಧಿತ ಟ್ಯಾಗ್ಗಳು

B.S.Yeddyurappa code of conduc ಕಾರ್ಯಾಗಾರ ಸಲಹೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ