ಶ್ರೀರಾಮುಲು ವಿರುದ್ಧ ತಿಪ್ಪೇಸ್ವಾಮಿ ಬೆಂಬಲಿಗರ ಆಕ್ರೋಶ

Thippeswamy

11-04-2018

ಚಿತ್ರದುರ್ಗ: ಮೊಳಕಾಲ್ಮೂರು ಶಾಸಕ ತಿಪ್ಪೇಸ್ವಾಮಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ, ಸಂಸದ ಶ್ರೀರಾಮುಲು ವಿರುದ್ಧ ತಿಪ್ಪೇಸ್ವಾಮಿ ಬೆಂಬಲಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಗ್ಯಾರಂಟಿ ಅಂತ ಹೇಳಿ, ತಾನೇ ಮೊಳಕಾಲ್ಮೂರು ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ ಎಂದು ಆಕ್ರೋಶಗೊಂಡು, 30ಕ್ಕೂ ಹೆಚ್ಚು ಬಸ್ ಗಳು ಹಾಗೂ ಕಾರು, ಕ್ರೂಸರ್ ಗಳಲ್ಲಿ ತೆರಳಿ ಬಳ್ಳಾರಿ ಶ್ರೀರಾಮುಲು ಮನೆ ಮುಂದೆ ಧರಣಿ ನಡೆಸಿದ್ದಾರೆ.

ಕಳೆದ ಮೂರು ದಿನಗಳಿಂದ ತಿಪ್ಪೇಸ್ವಾಮಿಗೆ ಟಿಕೆಟ್ ನಿಡುವಂತೆ ಒತ್ತಡ ಹಾಕುತ್ತಿರುವ ಬೆಂಬಲಿಗರು, ಒಂದು ವೇಳೆ ತಿಪ್ಪೇಸ್ವಾಮಿಗೆ ಟಿಕೆಟ್ ನೀಡದೆ ಹೋದರೆ ಶ್ರೀರಾಮುಲು ಗೆ ಮೊಳಕಾಲ್ಮೂರು ಕ್ಷೇತ್ರದ ಒಳಗೆ ಬರಲು ಬಿಡುವುದಿಲ್ಲ, ಶ್ರೀರಾಮಲು ವಿರುದ್ಧವಾಗಿ ಮತ ಚಲಾಯಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ತಿಪ್ಪೇಸ್ವಾಮಿ ಅವರನ್ನು ಪಕ್ಷೇತರರನ್ನಾಗಿ‌ ನಿಲ್ಲಿಸಿ ಗೆಲ್ಲಿಸುತ್ತೆವೆ ಎಂದು ಆಕ್ರೋಶಭರಿತ ಬೆಂಬಲಿಗರು ನುಡಿದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ