ರಾಮದಾಸ್ ವಿರುದ್ಧ ಗೋ.ಮಧುಸೂದನ್ ಬಂಡಾಯ!

Madhusudhan rebellion against Ramdas!

11-04-2018

ಮೈಸೂರು: ಮಾಜಿ ಸಚಿವ ಎಸ್.ಎ.ರಾಮದಾಸ್ ವಿರುದ್ಧ ಬಂಡಾಯವೆದ್ದ ಗೋ.ಮಧುಸೂದನ್, ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳಂಕಿತ ರಾಮದಾಸ್ಗೆ ಟಿಕೆಟ್ ಕೊಡಬೇಡಿ, ರಾಮದಾಸ್ಗೆ ಇಡೀ ಕೆ.ಆರ್.ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರ ಸಂಪೂರ್ಣ ವಿರೋಧವಿದೆ, ಸಾಮಾನ್ಯ ಕಾರ್ಯಕರ್ತ ನಿಂತರೂ ಬಿಜೆಪಿ ಗೆಲ್ಲುವ ಏಕೈಕ ಕ್ಷೇತ್ರ ಕೃಷ್ಣರಾಜ. ಹೀಗಿರುವಾಗ ಕಳಂಕಿತ ವ್ಯಕ್ತಿಗೆ ಟಿಕೆಟ್ ನೀಡಿ ಕ್ಷೇತ್ರ ಕಳೆದುಕೊಳ್ಳಬೇಡಿ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಅಲ್ಲದೇ ಒಂದೊಮ್ಮೆ ಟಿಕೆಟ್ ನೀಡಿದರೆ ಬಂಡಾಯ ಎದುರಿಸಬೇಕಾಗುತ್ತದೆ, ಪಕ್ಷ ತೆಗೆದುಕೊಳ್ಳುವ ಅಂತಹ ತೀರ್ಮಾನವನ್ನು ನಾನು ವಿರೋಧಿಸುತ್ತೇನೆ, ರಾಮದಾಸ್ ಗೆ ಟಿಕೆಟ್ ಕೊಟ್ಟರೆ ಪಕ್ಷೇತರನಾಗಿ ನಾನೇ ಸ್ಪರ್ಧೆ ಮಾಡುವೆ ಎಂದು ಎಚ್ಚರಿಸಿದ್ದಾರೆ. ಪಕ್ಷದ ಕಾರ್ಯಕರ್ತರ ನೈತಿಕತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ರಾಮದಾಸರ ಯಾವ ಒತ್ತಡಕ್ಕೂ ಮಣಿಯದೇ ಟಿಕೆಟ್ ನಿರಾಕರಿಸಬೇಕು. ನಾನು ಹುಟ್ಟು ಹೋರಾಟಗಾರ, ತುರ್ತು ಪರಿಸ್ಥಿತಿಯಲ್ಲಿ ಜೈಲು‌ ಸೇರಿದ್ದೆ, ಮೈಸೂರಿನ ಎಲ್ಲಾ ಬೆಳವಣಿಗೆಗಳ ಬಗ್ಗೆ ಭಾವನಾತ್ಮಕ ಸಂಬಂಧವಿದೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ