ಕೆಎಎಸ್ ನೇಮಕಾತಿಯಲ್ಲಿ ಅಕ್ರಮ: ಸುಪ್ರೀಂ ಕೋರ್ಟ್

Illegal in KAS appointment: Supreme Court

11-04-2018

ಬೆಂಗಳೂರು: 1998, 99, 2004ರ ಕೆಪಿಎಸ್ಸಿ ಮೂಲಕ ನಡೆದಿದ್ದ ಕೆಎಎಸ್ ಅಧಿಕಾರಿಗಳ ನೇಮಕಾತಿಯಲ್ಲಿ ಆಕ್ರಮ ನಡೆದಿದೆ ಎಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಸುಪ್ರೀಂಕೋರ್ಟ್ ನ ಈ ತೀರ್ಪಿನಂದ 28 ಕೆಎಎಸ್ ಅಧಿಕಾರಿಗಳು ಹುದ್ದೆ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಕೆಲ ಐಎಎಸ್ ಅಧಿಕಾರಿಗಳಿಗೆ ಹಿಂಬಡ್ತಿಯಾಗುವ ಸಾಧ್ಯತೆ ಇದೆ.

ಕೆಪಿಎಸ್ಸಿ ನೇಮಕಾತಿಯಲ್ಲಿ ಲೋಪವಾಗಿದೆ ಎಂದಿದ್ದ ಹೈಕೋರ್ಟ್ 1:5ರ ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಗೆ ಸೂಚಿಸಿತ್ತು. ಅಲ್ಲದೆ, ಅರ್ಹ ಅಭ್ಯರ್ಥಿಗಳ ಆಯ್ಕೆಗೆ ಹೈಕೋರ್ಟ್ ಅದೇಶಿಸಿತ್ತು. ಕೆಪಿಎಸ್ ಸಿ 1998ರ ಆಯ್ಕೆಪಟ್ಟಿಗೆ ಸಂಬಂದಪಟ್ಟಂತೆ 2014ರಲ್ಲಿ ಪ್ರಕಟಿಸಿದ ಮರು ಆಯ್ಕೆಪಟ್ಟಿಯಂತೆ ನೇಮಿಸಲು ರಾಜ್ಯಸರ್ಕಾರ ಮತ್ತು ಕೆಪಿಎಸ್ಸಿಗೆ ಹೈಕೋರ್ಟ್ ಸೂಚಿಸಿತ್ತು .


ಸಂಬಂಧಿತ ಟ್ಯಾಗ್ಗಳು

supreme court KPSC ಐಎಎಸ್ ಹಿಂಬಡ್ತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ