‘ಚಿತ್ತಾಪುರ ಕ್ಷೇತ್ರ ಬಿಡಲ್ಲ’- ಪ್ರಿಯಾಂಕ್ ಖರ್ಗೆ

priyank kharge challenged to Malikayya Guttedar

11-04-2018

ಕಲಬುರ್ಗಿ: 'ಚಿತ್ತಾಪುರ ಕ್ಷೇತ್ರ ಬಿಡಲ್ಲ, ಕಲಬುರಗಿ ಗ್ರಾಮೀಣ ಕ್ಷೇತ್ರಕ್ಕೆ ಹೋಗುವುದಿಲ್ಲ' ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ನಿಲ್ಲುತ್ತೇನೆ ಎನ್ನುವುದು ಗಾಳಿ ಸುದ್ದಿ, ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಲು ಬಿಜೆಪಿ ಗಾಳಿ ಸುದ್ದಿ ಹರಡಿಸಿದೆ ಎಂದು ದೂರಿದರು.

ಪ್ರೀಯಾಂಕ್ ಖರ್ಗೆ ಓರ್ವ ಬಚ್ಚಾ ಎಂಬ ಮಾಲೀಕಯ್ಯ ಗುತ್ತೇದಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಬಚ್ಚಾ ಯಾರು ಎಂಬುದು ಮತದಾರರು ನಿರ್ಧರಿಸುತ್ತಾರೆ. ಅಫಜಲಪುರದಲ್ಲಿ ಈ ಬಾರಿ ಗುತ್ತೇದಾರ್ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ.


ಸಂಬಂಧಿತ ಟ್ಯಾಗ್ಗಳು

priyank kharge Malikayya Guttedar ಸವಾಲು ಮತದಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ