‘ಮೋದಿ ಮಾತುಗಳಿಗೆ ಮಾರುಹೋಗಬೇಡಿ’09-04-2018

ಬೆಂಗಳೂರು: ಪ್ರಧಾನಿ‌ ನರೇಂದ್ರ ಮೋದಿ ಅವರ ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕದಂತೆ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷದ ನಾಯಕ  ಕೆ.ಇ.ಕೃಷ್ಣಮೂರ್ತಿ ಕರೆ ನೀಡಿದ್ದಾರೆ. ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ‌  ಮಾತನಾಡಿದ ಕೃಷ್ಣ ಮೂರ್ತಿ, ತಿರುಪತಿ ತಿಮ್ಮಪ್ಪನ ಮಂದಿರದಲ್ಲಿ ಆಂಧ್ರಪ್ರದೇಶ ಜನರಿಗೆ ನೀಡಿದ ಭರವಸೆ ಈಡೇರಿಸದೆ ತೆಲುಗು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.

ಕರ್ನಾಟಕದಲ್ಲಿ‌ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಯಾರೂ ಮಾರು ಹೋಗಬೇಡಿ. ಕರ್ನಾಟಕ‌ ವಿಧಾನಸಭೆ ಚುನಾವಣೆಯಲ್ಲಿ‌ ತೆಲುಗು ಭಾಷಿಕರು ಮೋದಿ(ಬಿಜೆಪಿ) ಪಕ್ಷಕ್ಕೆ ಮತ ಹಾಕದೆ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ ತೆಲುಗು ಜನರ ಪರ ನಿಲ್ಲುವಂತೆ ಕೆ.ಇ ಕೃಷ್ಣಮೂರ್ತಿ ಕರೆ ನೀಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ