ನವ ವಿವಾಹಿತೆ ಅನುಮಾನಾಸ್ಪದ ಸಾವು

Recently married woman suspicious death

09-04-2018

ಬೆಂಗಳೂರು: ಕೆ.ಆರ್.ಪುರದ ರೈಲ್ವೆ ವಸತಿನಿಲಯದಲ್ಲಿ ಮೂರು ವಾರದ ಹಿಂದೆ ಮದುವೆಯಾಗಿದ್ದ ನವ ವಿವಾಹಿತೆ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಸ್ಪದವಾಗಿ ಮೃತಪಟ್ಟ ಘಟನೆ ನಡೆದಿದೆ.

ಕೆ.ಆರ್.ಪುರಂನ ಟಿಸಿಪಾಳ್ಯದ ರಮಿತಾ(22)ಎಂದು ಮೃತರನ್ನು ಗುರುತಿಸಲಾಗಿದೆ. ವೋಲಾ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ರಮಿತಾ ಮೂರು ವಾರಗಳ ಹಿಂದೆಯಷ್ಟೇ ರೈಲ್ವೆ ಇಲಾಖೆಯಲ್ಲಿ ಮೆಕ್ಯಾನಿಕ್ ಆಗಿದ್ದ ನರೇಶ್ ನನ್ನು ಮದುವೆ ಆಗಿದ್ದರು. ನರೇಶ್ ಜೊತೆ ರೈಲ್ವೆ ವಸತಿನಿಲಯದಲ್ಲಿ ವಾಸಿಸುತ್ತಿದ್ದ ರಮಿತಾ ನಿನ್ನೆ ರಾತ್ರಿ ಕಂಠಮಟ್ಟ ಕುಡಿದಿದ್ದರಿಂದ ಆತನ ಜೊತೆಗಿರದೇ ಬೇರೊಂದು ಕೊಠಡಿಯಲ್ಲಿ ಮಲಗಿದ್ದು ಅಲ್ಲೇ ನೇಣಿಗೆ ಶರಣಾಗಿದ್ದಾರೆ.

ಬೆಳಿಗ್ಗೆ ನರೇಶ್ ಎದ್ದು ನೋಡಿದಾಗ ರಮಿತಾ ನೇಣು ಬಿಗಿದುಕೊಂಡಿದ್ದು ಕೂಡಲೇ ಕೆ.ಆರ್.ಪುರಂ ಠಾಣೆಗೆ ಬಂದು ಮಾಹಿತಿ ನೀಡಿದ್ದಾರೆ. ರಮಿತಾ ಪೋಷಕರು ತಮ್ಮ ಮಗಳನ್ನು ಕೊಲೆ ಮಾಡಿ ನೇಣು ಬಿಗಿಯಲಾಗಿದೆ ಎಂದು ಆರೋಪಿಸಿದ್ದಾರೆ. ಕೆ.ಆರ್.ಪುರಂ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

 


ಸಂಬಂಧಿತ ಟ್ಯಾಗ್ಗಳು

suicide suspect ನೇಣು ತನಿಖೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ